
ಹಿರಿಯೂರು:
ಹಣಕಾಸು ವ್ಯವಹಾರ, ಬ್ಯಾಂಕ್ ವಹಿವಾಟು ಮಾಡುವಾಗ ಎಚ್ಚರ ವಹಿಸಬೇಕು.ಸಾರ್ವಜನಿಕರು ಸೈಬರ್ ವಂಚಕರಿಂದ ದೂರ ಉಳಿಯಬೇಕು ಎಂಬುದಾಗಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ. ಅನುಸೂಯಮ್ಮ ಅವರು ಹೇಳಿದರು.
ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿದ್ದ 18ನೇ ದಿನದ ಬೀಟ್ ಚಟುವಟಿಕೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸಾರ್ವಜನಿಕರು ಒತ್ತು ನೀಡಬೇಕು.ಇಂತಹ ವಿಷಯಗಳ ಕುರಿತು ಪ್ರತಿಯೊಬ್ಬರು ಅರಿವು ಹೊಂದಬೇಕು.ಎಂದಲ್ಲದೆ,
ಸಾರ್ವಜನಿಕರಲ್ಲಿ ಕಾನೂನು ಪಾಲನೆ ಮತ್ತು ಸಾಮಾಜಿಕ ಜವಬ್ದಾರಿ ಬೆಳೆಸುವುದು, ಪೊಲೀಸ್ ಸಮುದಾಯ ಸಹಭಾಗಿತ್ವ ಬಲಪಡಿಸುವುದರ ಬಗ್ಗೆ ಅವರು ಮಾಹಿತಿ ನೀಡಿದರು.
ಅಪರಾಧ ತಡೆ ಮಾಸಾಚರಣೆಗೆ ಸಹಕರಿಸಿದ ಯಲ್ಲದಕೆರೆ ಜ್ಞಾನಜ್ಯೋತಿ ಪ್ರೌಢಶಾಲಾ ಶಿಕ್ಷಕರು, ಪ್ರಾಧ್ಯಾಪಕರಿಗೆ , ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಪೊಲೀಸರು ಧನ್ಯವಾದ ಹೇಳಿದರು.

ಈ ಕಾರ್ಯಕ್ರಮದಲ್ಲಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ.ಜಯಪ್ರಕಾಶ್, ಯಲ್ಲದಕೆರೆ ವಿಭಾಗದ ಬೀಟ್ ನೋಡಲ್ ಅಧಿಕಾರಿ ಜಾಫರ್ ಸೇರಿದಂತೆ ಶಾಲಾ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
