March 5, 2026
000002

ಹಿರಿಯೂರು:

ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅವರು ದೇಶಕ್ಕೆ  ನೀಡಿದ ಕೊಡುಗೆಯನ್ನು ಸ್ಮರಿಸಿದರು. ಅಂಬೇಡ್ಕರ್ ಅವರ ಆದರ್ಶ, ತತ್ವ, ಸಿದ್ಧಾಂತ ಸಂವಿಧಾನದ ಕೊಡುಗೆ ,ಶೋಷಿತ ಸಮುದಾಯಕ್ಕೆ ನ್ಯಾಯ, ಸರ್ವ ಜನಾಂಗಕ್ಕೂ ಸಮಾನತೆ ನೀಡಿದ್ದನ್ನು ಯಾರು ಮರೆಯುವಂತಿಲ್ಲ ಎಂಬುದಾಗಿ  ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ  ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಹೇಳಿದರು.

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅವರ 69ನೇ ಮಹಾಪರಿನಿರ್ವಾಣದ ಅಂಗವಾಗಿ ನಗರದ ಟಿ.ಬಿ.ವೃತ್ತದಲ್ಲಿರುವ ಅಂಬೇಡ್ಕರ್  ರವರ ಪ್ರತಿಮೆಗೆ  ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಅವರು ಮಾತನಾಡಿದರು.

ಹಿಂದುಳಿದವರ್ಗಗಳು, ಅಲ್ಪಸಂಖ್ಯಾತರು, ಕಾರ್ಮಿಕರು, ಮಹಿಳೆಯರ ಹಕ್ಕುಗಳಿಗಾಗಿ ಜೀವನವನ್ನೇ ಅರ್ಪಿಸಿದ ಅಂಬೇಡ್ಕರ್  ಅವರ ತತ್ವಗಳು ಇಂದಿಗೂ ನಮ್ಮನ್ನು ನ್ಯಾಯ,  ಸಮಾನತೆ ಮತ್ತು ಬಾಂಧವ್ಯದ ಮಾರ್ಗದಲ್ಲಿ ನಡೆಸುತ್ತಿವೆ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬರ ಜವಬ್ದಾರಿ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿಡಾ.ಜಿ.ಆರ್.ಸುಜಾತಾ, ಜ್ಞಾನೇಶ್, ನಗರಸಭೆ ಮಾಜಿ ಸದಸ್ಯೆ ಮಮತಾ, ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *