
ಹಿರಿಯೂರು:
ನಗರದ ಸುಪ್ರಸಿದ್ಧ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ಕಡೆ ಕಾರ್ತಿಕ ಪೂಜಾ ಕಾರ್ಯಕ್ರಮವನ್ನು ಬಹಳ ಅದ್ದೂರಿಯುತವಾಗಿ ಆಚರಿಸಲಾಯಿತು.

ಮುಂಜಾನೆಯೇ ಸ್ವಾಮಿಗೆ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಹೂವಿನ ಅಲಂಕಾರ, ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಂಜೆ ತೇರುಮಲ್ಲೇಶ್ವರ ಸ್ವಾಮಿ, ಚಂದ್ರಮೌಳೇಶ್ವರಸ್ವಾಮಿ ಮತ್ತು ಉಮಾಮಹೇಶ್ವರಸ್ವಾಮಿ ದೇವರುಗಳನ್ನು ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ದೇವಾಲಯದಿಂದ ಪ್ರಮಖ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ನಡೆಸಲಾಯಿತು.

ದೇವಾಲಯದ ಆವರಣದ ಸುತ್ತಲೂ ಝಘಮಘಿಸುವ ವಿದ್ಯತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಾತ್ರಿವರೆಗೂ ತೀರ್ಥ ಪ್ರಸಾದ ವನಿಯೋಗ ನಡೆಸಲಾಯಿತು.ಭಕ್ತರು ಸ್ವಾಮಿಯ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಭಾಗವಹಿಸಿ ಈ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
