April 20, 2026
00002

ಹಿರಿಯೂರು:

ನಾಡಿನ ಪವಿತ್ರ ಪುಣ್ಯಕ್ಷೇತ್ರ  ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ 78ನೇ ಹುಟ್ಟುಹಬ್ಬದ ಪ್ರಯುಕ್ತ ಶುಭೋದಯ ಶೈಕ್ಷಣಿಕ ಸೇವಾ ವೃದ್ಧಾಶ್ರಮ ಭೀಮನಬಂಡೆ ಆಶ್ರಮಕ್ಕೆ ಒಂದು ತಿಂಗಳಿಗೆ  ಆಗುವಷ್ಟು ಅಡಿಗೆ ಸಾಮಾಗ್ರಿಗಳನ್ನು , ಅಕ್ಕಿ, ಬೇಳೆ, ಬೆಲ್ಲ ಹಾಗೂ ಇತರೆ  ಅಡಿಗೆ ಸಾಮಾಗ್ರಿಗಳನ್ನು ಧರ್ಮಸ್ಥಳ ಗ್ರಾಮಾಭಿವೃದ‍್ಧಿ ಯೋಜನೆ ವತಿಯಿಂದ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ವಿನಯ್ ಕುಮಾರ್ ಸುವರ್ಣ ಅವರು ಮಾತನಾಡಿ ಕಾಲಕ್ಕನುಗುಣವಾಗಿ ನವೀನ ದಿಕ್ಕನ್ನು ನೀಡಿ ಉತ್ತಮ ಸಮಾಜದತ್ತ ಎಲ್ಲರ ಚಿತ್ತ ಹರಿಸುತ್ತ ಎಲ್ಲರಿಗೂ ಆಶಿರ್ವದಿಸುತ್ತಿರುವ ಶ್ರೀಯವರಿಗೆ ಶ್ರೀ ಮಂಜುನಾಥಸ್ವಾಮಿ ಆರೋಗ್ಯವನ್ನು ನೀಡಲಿ ಎಂಬುದಾಗಿ ಅವರು ಶುಭಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ರವಿಹಿತ್ತಲಮನಿ, ಜಾಗೃತಿ ವೇದಿಕೆಯ ಸದಸ್ಯರು, ಮಸ್ಕಲ್ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಕೊಲ್ಲಮ್ಮ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ತಿಪ್ಪಮ್ಮ, ನಾಗರಾಜ್, ಕಿರಣ್ ಜೈನ್,  ಆಶ್ರಮದ ಮುಖ್ಯಸ್ಥರಾದ ಎಂ.ತೇಜೋಮೂರ್ತಿ ಮತ್ತು ಮೇಲ್ವಿಚಾರಕರು ಸಂಘದ ಸದಸ್ಯರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *