
ಹಿರಿಯೂರು:
ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಾಮಿಯಾ ಮಸೀದಿಗೆ ಕರ್ನಾಟಕ ಸರ್ಕಾರದ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್ ರವರು ಭೇಟಿ ನೀಡಿ ಸ್ಥಳೀಯ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಶುಭಾಶಯಗಳ ಕೋರಿದರು.
ಇದೇ ಸಂದರ್ಭದಲ್ಲಿ ಜಿ.ಎಸ್. ಮಂಜುನಾಥ್ ರವರಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಆಸೀಫ್ ಅಲಿ, ಮಹಮದ್ ಅಲಿ, ಗ್ರಾಮಪಂಚಾಯಿತಿ ಸದಸ್ಯರಾದ ಮುನೀರ್, ಬ್ಲಾಕ್ ಕಾಂಗ್ರೆಸ್ ಎಸ್.ಸಿ. ಸೆಲ್ ವಿಭಾಗದ ಅಧ್ಯಕ್ಷರಾದ ಜಿ.ಎಲ್. ಮೂರ್ತಿ, ಕೂನಿಕೆರೆ ರಫೀಕ, ಮನುನಾಥ್, ಹಾಗೂ ಹೆಚ್.ಎಸ್. ಮಾರುತೇಶಕೂನಿಕೆರೆ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
