
ಚಿತ್ರದುರ್ಗ:
ಸಾಧಕರ ಸಾಧನೆಯ ಹಾದಿ ಕಲ್ಲುಮುಳ್ಳುಗಳಿಂದ ಕೂಡಿರುತ್ತದೆ. ಸಾಧನೆಯ ಹಾದಿಗೆ ಬೇಕಾಗಿರುವುದು ಕಠಿಣ ಪರಿಶ್ರಮ, ನಿರಂತರ ಪ್ರಯತ್ನ. ಸಾಧನೋತ್ಸವ ಕಾರ್ಯಕ್ರಮದಲ್ಲಿರುವ ಸಾಧಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ. ಇವರ ಸಾಧನೆಗೆ ಗೌರವವನ್ನು ಸಲ್ಲಿಸುತ್ತಿರುವ ಪ್ರಥಮ ಶಿಕ್ಷಣಸಂಸ್ಥೆ ವಿಜಯ ಕಿರಣ ಪರಿಸರ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂಬುದಾಗಿ ಡಾ. ಬಸವಕುಮಾರ ಮಹಾಸ್ವಾಮಿಜಿಗಳು ಹೇಳಿದರು.
ನಗರದ ಬಾಪೂಜಿ ಸಮೂಹ ಸಂಸ್ಥೆಗಳ ಆವರಣದಲ್ಲಿ ಪ್ರಥಮ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ವಿಜಯ ಕಿರಣ ಪರಿಸರ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆಯ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಧನೋತ್ಸವ ಸಾಧಕರ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ನಾವು ಗೆಲ್ಲಬೇಕೆಂಬ ಇಚ್ಛೆ ಇರುತ್ತದೆ. ಆದರೆ ಬಹಳ ಕಡಿಮೆ ಜನರಿಗೆ ಮಾತ್ರ ಸಿದ್ಧರಾಗುವ ಇಚ್ಛೆ ಇರುತ್ತದೆ. ಜೀವನದಲ್ಲಿ ಕಠಿಣ ಪರಿಶ್ರಮಕ್ಕೆ ಒಂದೇ ಒಂದು ದಾರಿ ಇರುತ್ತದೆ ಅದು ಹೆಚ್ಚಾಗಿ ಯಶಸ್ಸಿನ ಹಾದಿಗೆ ಕಾರಣವಾಗುತ್ತದೆ ಎಂದರಲ್ಲದೆ,
ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಅವರಿಗೆ ಪ್ರೋತ್ಸಾಹಿಸುವುದರ ಮೂಲಕ ಅವರ ಸಾಧನೆಗೆ ಸ್ಫೂರ್ತಿಯಾಗೋಣ ಸಾಧಕರ ಸಾಧನೆಗಳೇ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂಬುದಾಗಿ ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಕೆ.ಎಂ.ವೀರೇಶ್ ಅವರು ಮಾತನಾಡಿ, ಸಾಧನೆಗೈದ ಸಾಧಕರೆ ನಮ್ಮ ಆಸ್ತಿ ಸಮಾಜದಲ್ಲಿರುವ ಸಾಧಕರನ್ನು ಗುರುತಿಸಿ ಅವರಿಗೆ ಬೆನ್ನು ತಟ್ಟುವುದರ ಮೂಲಕ ಅವರ ಸಾಧನೆಗೆ ಕಿವಿಯಾಗೋಣ ಇಂತಹ ಸಾಧಕರ ಸಾಧನೆ ಇಂದಿನ ಯುವ ಜನರಿಗೆ ಆದರ್ಶವಾಗಲಿ ಎಂದರಲ್ಲದೆ,
ಡಾ.ಬಸವಕುಮಾರ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಾಧಕರ ಪುಣ್ಯವಾಗಿದ್ದು, ಸಾಧಕರ ಸಾಧನೆಯು ದೇಶದೆಲ್ಲಡೆ ಮನೆಮಾತಾಗಲಿ ಎಂಬುದಾಗಿ ಶುಭಹಾರೈಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮುಖ್ಯಶಿಕ್ಷಕ ಡಾ.ಮಹೇಶ್ ಕಡ್ಲೆಗುದ್ದು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಾಧನೆ ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ. ಸಾಧನೆ ಮಾಡದೆ ಸತ್ತರೆ ಸಾವಿಗೆ ಅವಮಾನ ಎಂಬ ನುಡಿಯಂತೆ ಪ್ರತಿಯೊಬ್ಬರೂ ಜೀವನದಲ್ಲಿ ಸಾಧನೆ ಮಾಡಬೇಕು ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಇಂತಹ ಸಾಧನೆಗೈದ ಸಾಧಕರಿಗೆ ಸಾಧನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ವಿಶ್ವ ಕನ್ನಡ ಕಲಾ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ನವೀನ್ ಬಿ.ಸಜ್ಜನ್ ಚುಟುಕು ಸಾಹಿತಿ ವಿನಾಯಕ, ವಿಜಯ ಕಿರಣ ಸಂಸ್ಥೆಯ ಕೊಲ್ಲೂರಪ್ಪ ಪ್ರಥಮ್ ಸಂಸ್ಥೆಯ ನಂಜುಂಡೇಶ್ವರ, ವಿಶ್ವ ಕನ್ನಡ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಈ.ರವೀಶ, ಡಾ. ನವೀನ್ ಮಸ್ಕಲ್, ಡಾ. ಬಸವರಾಜ್ ಹರ್ತಿ ಜ್ಞಾನದೇವ ವಿಷನ್ ಪಿಯು ಕಾಲೇಜು ಪ್ರಾಂಶುಪಾಲರು ಇವರಿಗೆ ಅಭಿನಂದನೆಗಳುನ್ನು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಶೈಲಜಾಬಾಬು ಅವರು ಮಾತನಾಡಿ ಸಾಧಕರಿಗೆ ಭಗವಂತನು ಇನ್ನಷ್ಟು ಸ್ಫೂರ್ತಿ ನೀಡಿ, ದೇಶಕ್ಕೆ ಕೀರ್ತಿ ತರುವಂತಾಗಲಿ ಪ್ರತಿಯೊಬ್ಬರೂ ಸಮಾಜದ ಋಣವನ್ನು ತೀರಿಸುವ ಜವಾಬ್ದಾರಿ ಹೊಂದಿದ್ದು, ಈ ಮೂಲಕ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು ಇಂತಹ ಸಾಧನೆ ಮಾಡಿದ ಸಾಧಕರು ಇಂದಿನ ಯುವಜನತೆಗೆ ಆದರ್ಶವಾಗಲಿ, ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆ ಸಾಧಕರಿಂದ ಆಗಲಿ ಎಂಬುದಾಗಿ ಹೇಳಿದರು.
ಹುರಳಿಬಸವರಾಜ್ ಕಾರ್ಯದರ್ಶಿಗಳು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಇವರು ಸಾಧನೆ ಮತ್ತು ಸಾಧಕರ ಬಗ್ಗೆ ಕುರಿತು ಉಪನ್ಯಾಸವನ್ನು ನೀಡಿದರು
ಈ ಕಾರ್ಯಕ್ರಮದಲ್ಲಿ 70ಕ್ಕಿಂತ ಹೆಚ್ಚಿನ ಸಾಧಕರಿಗೆ ಕರುನಾಡಶಿಕ್ಷಣರತ್ನ, ಸಮಾಜರತ್ನ, ಸೇವರತ್ನ, ವೈದ್ಯಕೀಯರತ್ನಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಮಯದಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆಯ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ಈ. ರವೀಶ ಅಕ್ಕರ ರವರು ತಮ್ಮ ಸಂಸ್ಥೆಯ ಮತ್ತೊಂದು ಚಿತ್ರದುರ್ಗದಲ್ಲಿ ಜಿಲ್ಲಾ ಘಟಕ ಉದ್ಘಾಟಿಸಿ ಸಂಸ್ಥೆಯ ಪದಾಧಿಕಾರಿಗಳಿಗೆ ನೇಮಕಾತಿ ಆದೇಶವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಈ.ರವೀಶ, ಶಫಿವುಲ್ಲಾ, ಜ್ಞಾನದೇವ್, ಹಾಸ್ಯ ಸಾಹಿತಿ ಜಗನ್ನಾಥ, ವೀರೇಶ್ ಪಿಲ್ಲಹಳ್ಳಿ, ಪ್ರವೀಣ್ ಬೆಳಗೆರೆ, ಶಿಕ್ಷಕರಾದ ರಾಜೇಶ್, ಶ್ರೀನಿವಾಸ್, ಜಯಣ್ಣ, ಕೀರ್ತಿಕುಮಾರ್, ಡಾ. ಲೋಲಾಕ್ಸಮ್ಮ, ಅನಿತಾ ವಿನಯ್, ಪೂರ್ಣಿಮಾ, ಬಿ.ವಿ.ನಾಥ್ ಮೃತ್ಯುಂಜಯಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
