
ಹಿರಿಯೂರು :
ತಾಲ್ಲೂಕಿನ ವಾರ್ಡ್ ನಂಬರ್ 4ರಲ್ಲಿರುವ ಪೇಂಟ್ ವಿಜಯ್ ಅವರ ಮನೆಗೆ ಸಚಿವರಾಗಿದ್ದ ದಿವಂಗತ ಡಿ.ಸುಧಾಕರ್ ರವರ ಪುತ್ರ ಸುಹಾಸ್ ಸುಧಾಕರ್ ಭೇಟಿ ನೀಡಿ, ಅವರಿಗೆ ಉಂಟಾಗಿರುವ ಲಿವರ್ ಸೋಂಕಿನ ಸಮಸ್ಯೆಯ ಬಗ್ಗೆ ಚರ್ಚಿಸಿ, ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಹಾಸ್ ಸುಧಾಕರ್ ರವರು ವಿಜಯ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂಬುದಾಗಿ ಶುಭಹಾರೈಸಿದರಲ್ಲದೆ, ವಿಜಯ್ ರವರ ಕುಟುಂಬದವರಿಗೆ ಧೈರ್ಯ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಪೇಂಟ್ ವಿಜಯ್ ಕುಟುಂಬಸ್ಥರು ಉಪಸ್ಥಿತರಿದ್ದರು.
