
ಹಿರಿಯೂರು :
ಶ್ರೀನಿವಾಸನಗರದಲ್ಲಿರುವ ಹಿರಿಯೂರು ಯಜ್ಞವಲ್ಕ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಹಂಷಿಕ ಸುಹಾನಿ ಎಂಬ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 58 ಪರ್ಸೆಂಟ್ ಮಾರ್ಕ್ಸ್ ಪಡೆದು ಉತ್ತೀರ್ಣರಾಗಿದ್ದಳು, ಈ ಬಗ್ಗೆ ಮನೆಯಲ್ಲಿ ಹೋಗಿ ರಿಸಲ್ಟ್ ಬಗ್ಗೆ ಹೇಳಿದಾಗ ಅವಳ ಪೇರೆಂಟ್ಸ್ ಬಹಳ ಕಮ್ಮಿ ಮಾರ್ಕ್ಸ್ ಬಂದಿದೆ ಅಂತ ಬೈದಿದ್ದಾರೆ ಅದಕ್ಕೆ ಹಂಷಿಕ ಸುಹಾನಿ ಮನನೊಂದು ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಯಜ್ಞವಲ್ಕ ಸ್ಕೂಲ್ ಪ್ರಿನ್ಸಿಪಾಲರಾದ ಯೋಗೇಶ್ ರವರು ಕುಮಾರಿ ಹಂಷಿಕ ಸುಹಾನಿ ಒಳ್ಳೆಯ ವಿದ್ಯಾರ್ಥಿ ಎಂದು ಹೇಳಿದ್ದಾರೆ ಇವರ ತಂದೆ ಮರ ಕೆಲಸ ಮಾಡುತ್ತಾರೆ ಯುಪಿ ಸ್ಟೇಟ್ ನವರು ಎಂದು ತಿಳಿದು ಬಂದಿದ್ದು, ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂದ ನಂತರ ನಿಖರವಾದ ಮಾಹಿತಿ ಗೊತ್ತಾಗಲಿದೆ ಎಂಬುದಾಗಿ ಮಾಹಿತಿ ತಿಳಿದುಬಂದಿದೆ.
