April 22, 2026
00001

ಹಿರಿಯೂರು :

ಸಮಾಜದಲ್ಲಿ ಮಧ್ಯಪಾನ ಮಾಡುವುದು ಅತ್ಯಂತ ಹೇಯ ಕೆಲಸವಾಗಿದ್ದು, ಅಂತಹ ವ್ಯಕ್ತಿಯನ್ನು ಸಮಾಜ ನೋಡುವ ದೃಷ್ಟಿಕೋನವೇ ಬೇರೆಯಾಗಿದ್ದು, ಕುಡುಕ ವ್ಯಕ್ತಿಯನ್ನು ತನ್ನ ಸ್ವಂತ ಹೆಂಡತಿ, ಮಕ್ಕಳು, ಬಂದು-ಬಳಗ ಸಮಾಜದವರ ದೃಷ್ಟಿಯಲ್ಲಿ ತೀವ್ರ ತುಚ್ಛವಾಗಿ ನೋಡಲಾಗುತ್ತದೆ, ಅಂತಹ ವ್ಯಕ್ತಿ ತನ್ನ ಮನೆಯಲ್ಲಿಯೇ ಪರಕೀಯನಾಗಿ ಮದ್ಯವ್ಯಸನಿಯಾಗುತ್ತಾನೆ ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.

ನಗರದ ಕೃಷ್ಣಪ್ಪ ಸರ್ಕಲ್ ವೇದಾವತಿ ನಗರದ ನಗರಸಭೆ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ 1985ನೇ ಮದ್ಯವರ್ಜನಾ ಶಿಬಿರದ ಉದ್ಘಾಟನೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ನಂತರ ಅವರು ಮಾತನಾಡಿದರು. 

ಮನುಷ್ಯನ ಜೀವನದ “ಸಪ್ತ ವ್ಯಸನಗಳಲ್ಲಿ ಮದ್ಯಪಾನ ಮೊದಲ ಮೆಟ್ಟಿಲಾಗಿದ್ದು, ಈ ಮೆಟ್ಟಿಲನ್ನು ಒಮ್ಮೆ ಜಾರಿದರೆ ಉಳಿದೆಲ್ಲ ಮೆಟ್ಟಿಲುಗಳನ್ನು ಜಾರಿದಂತೆ” ಇಂತಹ ಮಧ್ಯಪಾನದಿಂದ ಇಂದಿನ ಯುವಪೀಳಿಗೆಯನ್ನು ಮುಕ್ತರಾಗಿಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ  ಮಧ್ಯವರ್ಜನ ಶಿಬಿರ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂಬುದಾಗಿ ಅವರು ಹೇಳಿದರು.

ಚಿತ್ರದುರ್ಗ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀಮತಿ ರೂಪಜನಾರ್ಧನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ  ವಿನಯ್ ಕುಮಾರ್ ಸುವರ್ಣ, 1985 ನೇ ಮದ್ಯಾವರ್ಜನಾ ಶಿಬಿರದ ವ್ಯವಸ್ಥಾಪಕರು ಸಮಿತಿ ಅಧ್ಯಕ್ಷರಾದ ಎಂ.ಶಂಕರ್ ಭಾಗವತ್, ಗೌರವ ಅಧ್ಯಕ್ಷರಾದ ಅಶೋಕ್, ಹಿರಿಯ ಪೊಲೀಸ್ ಅಧಿಕಾರಿ ಸುರೇಶ ನಾಯ್ಕ್, ಮದ್ಯಾವರ್ಜನಾ ಶಿಬಿರದ ವ್ಯವಸ್ಥಾಪಕ ಸಮಿತಿ ಮುಖ್ಯಸ್ಥರು ಹಾಗೂ ಯೋಜನಾಧಿಕಾರಿಗಳಾದ ರವಿ ಹಿತ್ತಲಮನಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಸದಸ್ಯರು, ಒಕ್ಕೂಟದ ಅಧ್ಯಕ್ಷರು ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *