
ಹಿರಿಯೂರು :
ಭಾರತೀಯ ದಲಿತ ಸಂಘರ್ಷ ಸಮಿತಿ ಡಾ.ಎಚ್.ಪ್ರಕಾಶ್ ಬೀರಾವರ ಸ್ಥಾಪಿತ ರಾಜ್ಯ ಕಾರ್ಯಧ್ಯಕ್ಷರಾದ ಕೆ.ತಿಮ್ಮರಾಜಣ್ಣನವರ ನೇತೃತ್ವದಲ್ಲಿ ಹಾಗೂ ತಾಲ್ಲೂಕು ಅಧ್ಯಕ್ಷರಾದ ಎಸ್.ಚಿದಾನಂದ ಇವರ ಅಧ್ಯಕ್ಷತೆಯಲ್ಲಿ ಭಾರತೀಯ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿ ಹಾಗೂ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.

ಜಿಲ್ಲಾ ಉಪಾಧ್ಯಕ್ಷರಾಗಿ ಮಂಜುನಾಥ್ ಹುಲುಕುಂಟೆ ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ತಿಮ್ಮರಾಜ್ ಚಳ್ಳಮಡ ಹಾಗೂ ಬೀದಿ ವ್ಯಾಪಾರಿ ತಾಲೂಕು ಅಧ್ಯಕ್ಷರನ್ನಾಗಿ ಅತಿಕ್ ಉಲ್ಲಾ ಹಾಗೂ ಗೌರವಾಧ್ಯಕ್ಷರನ್ನಾಗಿ ಸುಬ್ರಮಣ್ಯ ಹಾಗೂ ಉಪಾಧ್ಯಕ್ಷರನ್ನಾಗಿ ಗುರುಸ್ವಾಮಿ ಹಾಗೂ ಅಲ್ಪಸಂಖ್ಯಾತರ ಘಟಕ ತಾಲೂಕು ಕಾರ್ಯಧ್ಯಕ್ಷರನ್ನಾಗಿ ಇರ್ಫಾನ್ ಇವರುಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷರಾದ ಕೆ.ತಿಮ್ಮರಾಜು ಹಾಗೂ ರಾಜ್ಯ ಉಪಾಧ್ಯಕ್ಷರಾದ ಚಂದ್ರಪ್ಪ ಘಾಟ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಎಳೆನೀರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ರಾಜು ಸೊರಗನಹಳ್ಳಿ ಹಾಗೂ ಜಿಲ್ಲಾ ಉಪಾಧ್ಯಕ್ಷರು ದಾಸಭೋವಿ ಯುವ ಘಟಕ ಜಿಲ್ಲಾ ಅಧ್ಯಕ್ಷರಾದ ಆರ್.ಮಂಜುನಾಥ್ ಹಾಗೂ ಯುವ ಘಟಕ ಜಿಲ್ಲಾ ಕಾರ್ಯಧ್ಯಕ್ಷರಾದ ಯಶೋಧರ್ ಹಾಗೂ ತಾಲೂಕು ಅಧ್ಯಕ್ಷ ಎಸ್.ಚಿದಾನಂದ್ ಹಾಗೂ ಸಿರಾ ತಾಲೂಕು ಅಧ್ಯಕ್ಷ ರವಿಗೌನಹಳ್ಳಿ ಹಾಗೂ ಹಿಂದುಳಿದವರ್ಗ ತಾಲೂಕು ಅಧ್ಯಕ್ಷ ವೆಂಕಟೇಶ್ ಎಲ್.ಐ.ಸಿ ಹಾಗೂ ಕಾರ್ಮಿಕ ಘಟಕ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೂಡ್ಸ್, ಚಾಲಕರ ತಾಲೂಕು ಅಧ್ಯಕ್ಷ ನಿಂಗರಾಜ್ ಹಾಗೂ ಆಟೋ ಘಟಕ ತಾಲ್ಲೂಕು ಅಧ್ಯಕ್ಷ ಮಧು, ಕಾರ್ಯಾಧ್ಯಕ್ಷ ಆರ್.ಶಿವಲಿಂಗ ಹಾಗೂ ಹಿಂಡಸಕಟ್ಟೆ ಗ್ರಾಮ ಶಾಖೆ ಅಧ್ಯಕ್ಷ ರಂಗಸ್ವಾಮಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
