
ಹಿರಿಯೂರು :
ಸುಮಾರು 12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರು ಸರಳ ಕನ್ನಡದಲ್ಲಿ ವಚನಗಳನ್ನು ರಚಿಸಿ, ಜಾತಿ ಪದ್ಧತಿ, ಲಿಂಗತಾರತಮ್ಯದ ವಿರುದ್ಧ ಹೋರಾಡಿ, ಸಮಾನತೆ ಮತ್ತು ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಬೋಧಿಸಿ, ಸಾಮಾನ್ಯ ಜನರಿಗೂ ಅಧ್ಯಾತ್ಮ ಮತ್ತು ಸಾಮಾಜಿಕ ಜ್ಞಾನವನ್ನು ತಿಳಿಸಿದ ಮಹಾನ್ ಚೇತನ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಎಂ.ಸಿದ್ದೇಶ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಶ್ರೀಬಸವಜಯಂತ್ಯೋತ್ಸವ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಾನ್ ಕವಿ, ಸಮಾಜ ಸುಧಾರಕ ಮತ್ತು ದಾರ್ಶನಿಕರಾಗಿ ಹೊರಹೊಮ್ಮಿದ ಜಗಜ್ಯೋತಿ ಬಸವಣ್ಣನವರು “ಕಾಯಕವೇ ಕೈಲಾಸ” ಎಂಬ ತತ್ವವನ್ನು ಸಾರಿದರಲ್ಲದೆ, ತಮ್ಮ ಕಾವ್ಯದ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸಿ, ಸಮಾಜದಲ್ಲಿನ ಲಿಂಗ ತಾರತಮ್ಯ, ಸಾಮಾಜಿಕ ಪೂರ್ವಾಗ್ರಹವನ್ನು ದೂರಮಾಡಲು ಹೋರಾಡಿದ ಮಹಾನ್ ನಾಯಕ ಎಂಬುದಾಗಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಖಿಲಭಾರತ ವೀರಶೈವ ಲಿಂಗಾಯತ್ ಮಹಾಸಭಾ ಮಹಿಳಾ ಘಟಕದ ರಾಜ್ಯ ನಿರ್ದೇಶಕರಾದ ಶಶಿಕಲಾ ರವಿಶಂಕರ್ ರವರು ಮಾತನಾಡಿ,ವಿಶ್ವಮಾನ್ಯರಾದ ಸಾಂಸ್ಕೃತಿಕ ನಾಯಕರೆನಿಸಿಕೊಂಡ ಶ್ರೀಬಸವೇಶ್ವರರವರು ನಮ್ಮವರು, ಭಾರತೀಯರು ಎಂಬುದೇ ನಮಗೆ ಅತಿ ಹೆಮ್ಮೆಯ ವಿಷಯವಾಗಿದೆ ಎಂದರಲ್ಲದೆ,

ಬಸವಣ್ಣನವರು ಸ್ಥಾಪಿಸಿದ “ಅನುಭವಮಂಟಪ” ಪ್ರಜಾಪ್ರಭುತ್ವ ಮಾದರಿಯ ಆಧ್ಯಾತ್ಮಿಕ ವೇದಿಕೆಯಾಗಿತ್ತು, ಅದು ಎಲ್ಲಾ ಜಾತಿ,ವರ್ಗ,ಮತ, ಲಿಂಗದವರೂ ಸಹ ಮುಕ್ತವಾಗಿ ವಿಚಾರವಿನಿಮಯ ಮಾಡುವ ಅವಕಾಶ ಕಲ್ಪಿಸಿದರು, ಮಹಿಳೆಯರಿಗೆ ಸಮಾಜದಲ್ಲಿ ಸರಿಸಮಾನ ಸ್ಥಾನಮಾನ ನೀಡಿ ಗೌರವಿಸಿದ ಬಸವಣ್ಣನವರು ಸದಾ ಜಗತ್ವಂದನೀಯರು, ಪ್ರಾಥ:ಸ್ಮರಣೀಯರು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ತಹಶೀಲ್ದಾರರಾದ ಸಿದ್ದೇಶ್ ರವರು ವಹಿಸಿದ್ದರು. ವಿಶೇಷ ಉಪನ್ಯಾಸಕರಾಗಿ ಡಾ.ಲಕ್ಷ್ಮಿಸಿದ್ದೇಶ್ವರ, ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹೆಚ್.ಪಿ.ಮಹಂತೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಘಟಕದ ನಿರ್ದೇಶಕರಾದ ಪ್ರಶಾಂತ್, ತಾಲ್ಲೂಕು ವೀರಶೈವ ಸಂಘದ ನಿರ್ದೇಶಕರಾದ ಶಶಿಧರ್, ವಕೀಲರಾದ ಆರ್.ಟಿ.ಸತೀಶ್, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಎಂ.ಸಿ.ನಾಗರತ್ನ, ನಿರ್ದೇಶಕರಾದ ಕೆ.ಸಿ.ರಮೇಶ್, ನಗರ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಶಶಿಕಲಾ, ಮುಖಂಡರುಗಳಾದ ಶಿವಪ್ರಸಾದ್, ಶ್ರೀಮತಿ ಕೃಪಾಪ್ರದೀಪ್, ರಾಜಮಲ್ಲೇಶ್, ವೀರಭದ್ರಸ್ವಾಮಿ ದಯಾನಂದ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ, ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಬಿಸಿಎಂ ಇಲಾಖೆ ಅಧಿಕಾರಿ ಶಿವಕುಮಾರ್, ಕರ್ನಾಟಕ ಜಲಮಂಡಳಿ ಚಂದ್ರಶೇಖರ್, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್, ಡಿವೈಎಸ್.ಪಿ ಶಿವಕುಮಾರ್, ಶ್ರೀನಿವಾಸ್ ರೆಡ್ಡಿ, ಶ್ರೀಮತಿ ಶಶಿಕಲಾ ರವಿಶಂಕರ್, ಎಸ್.ಎನ್.ಮಂಜುನಾಥ್, ಕಣುಮೇಶ್, ಸುಷ್ಮಾ ಸೇರಿದಂತೆ ತಾಲ್ಲೂಕು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
