April 14, 2026
000003

ಹಿರಿಯೂರು :

ಶ್ರೀಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮದ ಹಿತೈಷಿಗಳೂ ದಾನಿಗಳು ಆದ ಆಲೂರು ಗ್ರಾಮದ ಗೀತಮ್ಮ ಇವರು ತಮ್ಮ ತಂದೆ ತಾಯಿಯ ಸವಿನೆನಪಿನಲ್ಲಿ ಆಶ್ರಮದ ಎಲ್ಲಾ ಹಿರಿಯರಿಗೆ ಯುಗಾದಿ ಹಬ್ಬದ ಪ್ರಯುಕ್ತ ಹೊಸ ಬಟ್ಟೆಯನ್ನು ವಿತರಿಸಿದ್ದಾರೆ, ಇವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂಬುದಾಗಿ ಆಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಹೇಳಿದರು.

ತಾಲ್ಲೂಕಿನ ಶ್ರೀಶುಭೋದಯ ಶೈಕ್ಷಣಿಕ ಸೇವಾ ವೃದ್ದಾಶ್ರಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಆಶ್ರಮದ ಎಲ್ಲಾ ಹಿರಿಯರಿಗೆ ಹೊಸಬಟ್ಟೆಗಳನ್ನು ವಿತರಿಸಿ, ನಂತರ ಅವರು ಮಾತನಾಡಿದರು.

ಶ್ರೀಮತಿ ಗೀತಮ್ಮರವರ ಸೇವಾಮನೋಭಾವಕ್ಕೆ ಶ್ರೀಆಶ್ರಮ ಸಮಿತಿ ವತಿಯಿಂದ ಅವರಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ದೈವಾನುಗ್ರಹ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುತ್ತಾ, ಆಶ್ರಮದ ನಿವಾಸಿಗಳ ಪರವಾಗಿ ತಮಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.  ಈ ಸಂದರ್ಭದಲ್ಲಿ ಶ್ರೀಮತಿ ಗೀತಮ್ಮರವರ ಕುಟುಂಬಸ್ಥರು ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *