April 14, 2026
1-

ಹಿರಿಯೂರು :

ನಗರದಲ್ಲಿ ಗುರುವಾರದಂದು ಯುಗಾದಿ ಹಾಗೂ ಶನಿವಾರದಂದು ರಂಜಾನ್ ಹಬ್ಬಗಳು ಒಟ್ಟಾಗಿ ಬಂದ ಹಿನ್ನೆಲೆಯಲ್ಲಿ ಹೊಸಬಟ್ಟೆ, ಹೂವು, ಹಣ್ಣು, ತರಕಾರಿ, ದಿನಸಿ, ಆಹಾರ, ಸಾಮಾಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಳ್ಳಲು ಗ್ರಾಮೀಣ ಭಾಗಗಳಿಂದ ಸಾವಿರಾರು ಸಂಖ್ಯೆಯ ಜನರು ನಗರದ ಮುಖ್ಯಬೀದಿಯ ಅಂಗಡಿಗಳ ಬಳಿ ಜಮಾಯಿಸಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು.

ಯುಗಾದಿ ಹಾಗೂ ರಂಜಾನ್ ಹಬ್ಬಗಳು ಒಟ್ಟಾಗಿ ಬಂದಿರುವ ಹಿನ್ನೆಲೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ತಮ್ಮ ತಂದೆ-ತಾಯಿ, ಹೆಂಡತಿ- ಮಕ್ಕಳಿಗೆ ಹೊಸ ಬಟ್ಟೆಬರೆ ಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಬಂದು ನಗರದ ಬಟ್ಟೆ ಅಂಗಡಿಗಳ ಮುಂದೆ ಮುಗಿ ಬಿದ್ದಿರುವ ದೃಶ್ಯ ಎಲ್ಲೆಲ್ಲೂ ಕಂಡು ಬರುತ್ತಿತ್ತು.

ನಗರದ ಮುಖ್ಯ ಬೀದಿಯ ಉದ್ದಕ್ಕೂ ಕಿರಾಣಿ ಅಂಗಡಿಗಳ ಮುಂದೆ ಹಾಗೂ ಜವಳಿ ಅಂಗಡಿಗಳ ಮುಂದೆ ಹಬ್ಬದ ಅಗತ್ಯ ವಸ್ತುಗಳನ್ನು ಕೊಳ್ಳಲು ಜನರು ಮುಗಿ ಬಿದ್ದಿದ್ದು, ಇದರಿಂದ ನಗರದ ಉದ್ದಗಲಕ್ಕೂ ವಿಪರೀತ ಟ್ರಾಫಿಕ್ ಉಂಟಾಗಿ, ನಗರದ ರಸ್ತೆಗಳಲ್ಲಿ ಎಲ್ಲೆಲ್ಲೂ ಕಾರುಗಳು, ಬೈಕ್, ಆಟೋ, ಮೋಟಾರ್ ಸೈಕಲ್ ವಾಹನಗಳೇ ಹೆಚ್ಚಾಗಿ ಕಂಡು ಬರುತ್ತಿದ್ದವು.

ನಗರದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿ ಮುಖ್ಯರಸ್ತೆಯ ಈ ಅಂಗಡಿಗಳ ಮುಂದೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರ ಜೊತೆಗೆ ಸಾವಿರಾರು ಬೈಕ್ ಗಳು, ಸ್ಕೂಟರ್ ಗಳು, ಹಾಗೂ ಕಾರುಗಳ ಸಂಖ್ಯೆಯೂ ಹೆಚ್ಚಾಗಿ ಜನರಿಗೆ ಪಾರ್ಕಿಂಗ್ ಸಮಸ್ಯೆ ಉಂಟಾಗಿ ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.ಆದರೂ ಸಾರ್ವಜನಿಕರು ತಮಗೆ ಅಗತ್ಯವಾದ ವಸ್ತುಗಳನ್ನು ಕೊಳ್ಳುತ್ತಾ ಯುಗಾದಿ ಹಾಗೂ ರಂಜಾನ್ ಹಬ್ಬದ ಸಡಗರ ಸಂಭ್ರಮದ ಖುಷಿಯಲ್ಲಿದ್ದರು.

See insights

Create ad

Like

Comment

Share

About The Author

Leave a Reply

Your email address will not be published. Required fields are marked *