
ಹಿರಿಯೂರು :
ರಂಜಾನ್ ಮಾಸವು ಸಹನೆ, ಸಹೋದರತ್ವ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ಈ ಪವಿತ್ರ ಸಂದರ್ಭದಲ್ಲಿ ಎಲ್ಲರೊಂದಿಗೆ ಸೇರಿ ಆತ್ಮೀಯವಾಗಿ ಸಮಯ ಕಳೆಯುವುದು ನನಗೆ ಅತ್ಯಂತ ಸಂತೋಷ ತಂದಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರದ ಬಿಲಾಲ್ ಮಸೀದಿಯಲ್ಲಿ ಮುಸ್ಲಿಂ ಭಾಂದವರೊಂದಿಗೆ ನಡೆದ ಇಫ್ತಿಯಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರೊಂದಿಗೆ ಇಫ್ತಿಯಾರ್ ಊಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಇಫ್ತಿಯಾರ್ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ನಗರಸಭೆ ಸದಸ್ಯರಾದ ಬಿ.ಎನ್.ಪ್ರಕಾಶ್, ಶಿವಕುಮಾರ್ ಸೇರಿದಂತೆ ಮಸೀದಿ ಮುಖ್ಯಸ್ಥರು ಹಾಗೂ ಅನೇಕ ಮುಸ್ಲಿಂ ಮುಖಂಡರುಗಳು ಭಾಗವಹಿಸಿದ್ದರು.
