
ಹಿರಿಯೂರು:
ತಾಲ್ಲೂಕಿನ ಆಲೂರು ಗ್ರಾಮದ ಶ್ರೀ ಆನಂದಾಶ್ರಮ ಮತ್ತು ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶ್ರೀಸುಖಾನುಭವಿಜಗನ್ನಾಥಸ್ವಾಮಿಗಳ 22ನೇ ವರ್ಷದ ಪುಣ್ಯಾರಾಧನೆ ಹಾಗೂ ರಕ್ಷಾ ಸುದರ್ಶನಹೋಮ ಮತ್ತು ವಿವಿಧ ಕಾರ್ಯಕ್ರಮಗಳು ಭಕ್ತಿ ಭಾವದಿಂದ ನೆರವೇರಿದವು.
ಈ ಪೂಜಾ ಕಾರ್ಯಕ್ರಮದಲ್ಲಿ ಆಶ್ರಮದ ಮುಖ್ಯಸ್ಥರಾದ ಶ್ರೀಶಂಕರಾನಂದ ಸ್ವಾಮಿಗಳು, ಅನೇಕ ಸ್ವಾಮಿಗಳು, ಅನೇಕ ಸ್ವಾಮೀಜಿಗಳು ಉಪಸ್ಥಿತರಿದ್ದರು.

ಗಂಗಾಪೂಜೆ, ಧ್ವಜಾರೋಹಣ, ಶ್ರೀ ಸುಖಾನುಭವಿ ಜಗನ್ನಾಥ ಸ್ವಾಮಿಗಳ ಗದ್ದುಗೆ ಪೂಜೆ 8ಗಂಟೆಯಿಂದ ಅಖಂಡ ಶಿವಪಂಚಾಕ್ಷರಿ ಮಂತ್ರ ಮಹಾಮಂಗಳಾರತಿ ಅಖಂಡ ಜಪ ನಡೆಯಿತು.
ರುದ್ರಾಭಿಷೇಕ, ಸುದರ್ಶನ ಹೋಮ, ಪ್ರವಚನ ನಂತರ ಪ್ರಸಾದ ವಿನಿಯೋಗ ಹಾಗೂ ಸತತ ಮೂರು ದಿನಗಳು ಅನ್ನದಾಸೋಹ ನಡೆಯಿತು. ಪ್ರವಚನ ಕಾರ್ಯಕ್ರಮದ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಅನೇಕ ಪೂಜ್ಯರು, ಸ್ವಾಮೀಜಿಗಳು ಹಾಗೂ ಮುಖಂಡರುಗಳು ಸೇರಿದಂತೆ ನಾನಾ ಊರುಗಳಿಂದ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
