
ಹಿರಿಯೂರು:
ಉತ್ತಮ ಆರೋಗ್ಯಕ್ಕೆ ವಯಸ್ಸಿನ ಯಾವುದೇ ಮಿತಿಯಿಲ್ಲ. ಸಧೃಢ ಆರೋಗ್ಯ ಪ್ರತಿಯೊಬ್ಬರ ಹಕ್ಕು ಅದಕ್ಕಾಗಿ ವ್ಯಾಯಾಮ, ನಿಯಮಿತ ಆಹಾರ ಸೇವನೆ, ಆರೋಗ್ಯಕರ ದಿನಚರಿ ಪಾಲನೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂಬುದಾಗಿ ಸತ್ವ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶಶಿಕಲಾರವಿಶಂಕರ್ ಅವರು ಹೇಳಿದರು
ನಗರದಲ್ಲಿ ಸತ್ವ ಮಹಿಳಾ ಸಂಸ್ಥೆಯ ವತಿಯಿಂದ ಹಿರಿಯ ನಾಗರೀಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಹದಿಹರೆಯದಿಂದ ಇಳಿವಯಸ್ಸಿನವರೆಗಿನ ಮಹಿಳೆಯರು ವಿವಿಧ ಆರೋಗ್ಯದ ಸಮಸ್ಯೆಗಳ ಬಗೆಗೆ ವಹಿಸಬೇಕಾದ ಮುಂಜಾಗರೂಕತಾ ಕ್ರಮಗಳನ್ನು ತಪ್ಪದೇ ಪಾಲಿಸುವುದು ಅತ್ಯವಶ್ಯ, ಆರೋಗ್ಯವಾಗಿದ್ದರೆ ಮಾತ್ರ ಲವಲವಿಕೆಯಿಂದ ಬದುಕು ಸಾಗಿಸಲು ಸಾಧ್ಯ ಎಂಬುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಯೋಜನಾ ನಿರ್ದೇಶಕರಾದ ನಿರ್ಮಲಾ ಮಹಂತೇಶ್ ಅವರು ಉಚಿತವಾಗಿ ಮಹಿಳೆಯರಿಗೆ ಅಗತ್ಯವಿರುವ ವಿವಿಧ ತಪಾಸಣೆಯನ್ನು ನಡೆಸಿದರು. ಪ್ರಧಾನ ಕಾರ್ಯದರ್ಶಿ ಸರ್ವಮಂಗಳಾ ರಮೇಶ್ ನಿಕಾರ್ಯಕ್ರಮವನ್ನು ನಿರೂಪಿಸಿದರು. ಖಜಾಂಜಿ ತ್ರಿವೇಣಿ ಸತೀಶ್ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಗೀತಾಹಿಮಾಚಲೇಶ್, ಲತಾಶಿವಪ್ರಸಾದ್, ಇಂಪಾರೀತೇಶ್, ಶ್ರೀಕರ, ನಾಗರತ್ನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
