April 27, 2026
0004

ಹಿರಿಯೂರು:

ಫೆಬ್ರವರಿ 23ರ ಸೋಮವಾರದಂದು ಟಿ.ಬಿ. ಸರ್ಕಲ್ ಅಂಬೇಡ್ಕರ್  ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ವರೆಗೆ ಕಾಲ್ನಡಿಗೆ ಮುಖಾಂತರವಾಗಿ ಒಂದು ದಿನದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಸಾಂಕೇತಿಕ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂಬುದಾಗಿ ರಾಜ್ಯ ಹೋರಾಟಗಾರರಾದ ಹುಲ್ಲೂರು ಕುಮಾರ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಒಳಮೀಸಲಾತಿ ಹೋರಾಟದ ವಿಚಾರವಾಗಿ ಕರಪತ್ರಗಳನ್ನು ಬಿಡುಗಡೆ ಮಾಡಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ನಂತರ ಅವರು ಮಾತನಾಡಿದರು.

ಹಿರಿಯೂರು ತಾಲ್ಲೂಕಿನ ಸಮಸ್ತ ಮಾದಿಗ ಸಮಾಜ ಹಾಗೂ ತಾಲ್ಲೂಕಿನ ಒಳಮೀಸಲಾತಿ ಹೋರಾಟ ಹೋರಾಟಗಾರರು ಅಭಿಮಾನಿಗಳು ಈ ಒಂದು ಹೋರಾಟಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಸಭೆಯಲ್ಲಿ ರಾಜ್ಯ ಹೋರಾಟಗಾರರಾದ ಹುಲ್ಲೂರು ಕುಮಾರ್, ಹಿರಿಯೂರಿನ ದಲಿತ ಸ್ವಾಭಿಮಾನಿ ಹೋರಾಟ ಸಮಿತಿಯ ಅಧ್ಯಕ್ಷರಾದಂತಹ ಬೋರನಕುಂಟೆ ಜೀವೇಶ್, ದಯಾನಂದ್ ಹೆಗ್ಗೆರೆ, ಮಂಜುನಾಥ್ ಇಂಡಸಕಟ್ಟೆ, ಮಂಜುನಾಥ್ ದೊಡ್ಡಘಟ್ಟಕುಮಾರ್, ಕದುರಪ್ಪ ಅನೇಕ ಹೋರಾಟಗಾರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *