March 2, 2026
6

ಹಿರಿಯೂರು :

ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುವ ಮಹಾಶಿವರಾತ್ರಿ ಹಬ್ಬವು ಶಿವಭಕ್ತರ ಪಾಲಿಗೆ ಅತ್ಯಂತ ಮಂಗಳಕರ ರಾತ್ರಿಯಾಗಿದ್ದು, ಆ ಪರಮೇಶ್ವರನು ಸಕಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂಬುದಾಗಿ ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರು ಹಾಗೂ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರಾದ ಆಲೂರು ಹನುಮಂತರಾಯಪ್ಪನವರು ಕೋರಿದ್ದಾರೆ.

ಬೆಳಗಿನ ವೇಳೆ ಉಪವಾಸವಿದ್ದು, ಶಿವನ ಆರಾಧನೆಯನ್ನು ಮಾಡುವ ಮೂಲಕ ಭಕ್ತಿ ಸಮರ್ಪಿಸಿ, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವನ ಕೃಪಾಶೀರ್ವಾದಕ್ಕೆ ಪಾತ್ರರಾಗುವುದು ಹಿಂದಿನಿಂದಲೂ ನಡೆಸಿಕೊಂಡ ಬಂದಿರುವ ವಾಡಿಕೆಯಾಗಿದ್ದು, ಆ ಪರಶಿವನು ನಮ್ಮ ಎಲ್ಲಾ ಫೇಸ್ ಬುಕ್ ಗೆಳೆಯ-ಗೆಳತಿಯರಿಗೂ, ನಮ್ಮ ಆತ್ಮೀಯರಿಗೂ, ಸ್ನೇಹಿತರಿಗೂ, ಪ್ರೀತಿಯ ಬಂಧು-ಮಿತ್ರರಿಗೂ ಆರೋಗ್ಯ, ಆಯಸ್ಸು, ಯಶಸ್ಸು ಕೊಟ್ಟು ಕಾಪಾಡಲಿ ಎಂಬುದಾಗಿ ಭಗವಂತನಲ್ಲಿ ಅವರು ಪ್ರಾರ್ಥಿಸಿದ್ದಾರೆ.

ಇದೇ ಸಂದರ್ಭದಲ್ಲಿ “ಹಿರಿಯೂರುನ್ಯೂಸ್” ತಂಡದ  ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ, ಉಮೇಶ್ ಯಾದವ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು  ಸಹ  ನಾಡಿನ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

About The Author

Leave a Reply

Your email address will not be published. Required fields are marked *