March 2, 2026
....5

ಹಿರಿಯೂರು:

ಸಮಾಜದ ಜನರಿಗೆ ಧರ್ಮ, ಆಚಾರ,  ವಿಚಾರ, ಸಂಸ್ಕೃತಿ ಮಾನವೀಯ ಮೌಲ್ಯಗಳ ಬಗ್ಗೆ  ತಿಳಿಸುವುದರ ಜೊತೆಗೆ  ಜನರನ್ನು ಧಾರ್ಮಿಕತೆಯತ್ತ  ಸೆಳೆಯುವ  ಮೂಲಕ ಶಾರದಾ ಆಶ್ರಮಗಳು ಪುಣ್ಯದ ಕಾರ್ಯ  ಮಾಡುತ್ತಿವೆ ಎಂಬುದಾಗಿ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ  ಡಿ.ಸುಧಾಕರ್  ಅವರು ಹೇಳಿದರು.

ನಗರದ ಲಕ್ಷ್ಮಮ್ಮಬಡಾವಣೆಯ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿರುವ ಶ್ರೀಶಾರದಾಶ್ರಮದ ಆವರಣದಲ್ಲಿ  ಶ್ರೀ  ಶಾರದಾದೇವಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಕಲ್ಯಾಣಕ್ಕೆ  ಆಧ್ಯಾತ್ಮಿಕ  ಚಟುವಟಿಕೆಗಳು ಅತ್ಯವಶ್ಯಕವಾಗಿದ್ದು, ಆಧ್ಯಾತ್ಮಿಕತೆಯಿಂದ ಹುಟ್ಟು, ಸಾವು ಮತ್ತು ಜೀವನದ ಅರ್ಥ  ಮತ್ತು ಗುರಿ ಏನೆಂಬುದು ತಿಳಿಯಲು ಸಹಾಯವಾಗುತ್ತದೆ ಎಂಬುದಾಗಿ ಅವರು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ  ಮಂಗಳೂರುರಾಮಕೃಷ್ಣ ಮಠದ ಅಧ್ಯಕ್ಷರಾದ  ಶ್ರೀಜಿತಾಕಾಮನಂದಜೀ ಆಶಿರ್ವಚನ ನೀಡಿ , ಶಾರದಾಶ್ರಮ ಆಧ್ಯಾತ್ಮಿಕ ಜೀವಿಗಳ ತಾಣ. ಭಗವಂತನ ಕಾರ್ಯ ವಿಧಾನಗಳನ್ನು ಅರ್ಥಮಾಡಿಕೊಳ್ಳುವುದು  ಕಷ್ಟ.  ಎಂದರಲ್ಲದೆ,

ಭಗವಂತನು ತನ್ನ ಲೀಲೆಯ ಮೂಲಕ ಇರುವಿಕೆ ಬಗ್ಗೆ ತಿಳಿಸುತ್ತಾನೆ. ಶುದ್ಧ   ಮನಸ್ಸಿನ ಭಕ್ತಿ ದೇವರಿಗೆ  ಇಷ್ಟ .ಶುದ್ಧ ಮನಸ್ಸು ಮತ್ತು ನಿಶ್ಚಲ ಭಕ್ತಿಯನ್ನು  ಪಡೆಯಲು ಗುರುಗಳು  ಹಾಗೂ ಶರದಾಶ್ರಮಗಳು ದಾರಿದೀಪವಾಗಿವೆ. ಎಂಬುದಾಗಿ ಅವರು ಹೇಳಿದರು.

ಬಳ್ಳಾರಿಯ ಶ್ರೀ ಮಂಗಳನಾತಾನಂದಜೀ ಅವರು ಮಾತನಾಡಿ, ಎಷ್ಟೇ ಸಾಧನೆಯನ್ನು ಮಾಡಿದರೂ  ಶರಣಾಗತಿ ಭಾವ ಬೇಕು. ಭಾಗವತ ಭಕ್ತಿ ಮತ್ತು  ವೇದಾಂತ  ಹೊಂದಿದ. ಭಕ್ತರು ಭಕ್ತಿಯಅನುಭೂತಿಗಳಾಗಬೇಕು ಎಂಬುದಾಗಿ ಅವರು ಹೇಳಿದರು.

ಮಾತಾಜಿ ವಿವೇಕಾಮಯಿ  ಪ್ರಾಸ್ತಾವಿಕವಾಗಿ ಮಾತನಾಡಿ  ಮಂದಿರ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಿದ  ಸಚಿವರಾದ ಡಿ.ಸುಧಾಕರ್  ಅವರ ಶ್ರದ್ಧಾ ಭಕ್ತಿ ಎಲ್ಲರಿಗೂ ಮಾದರಿಯಾಗಿದ್ದು, ಸಚಿವರು ಆಶ್ರಮ ಏನೇ ಕೇಳಿದರೂ ಇದುವರೆಗೂ ಇಲ್ಲ ಎಂದಿಲ್ಲಎಂಬುದಾಗಿ ಅವರು ಶ್ಲಾಘಿಸಿದರು.

 ಈ ಸಂದರ್ಭದಲ್ಲಿ  ಮಾತಾಜಿ ಚೈತನ್ಯಮಯಿ, ರಾಣಿಬೆನ್ನೂರಿನ ಪ್ರಕಾಶ, ನಂದಿಜೀ ಸೇರಿದಂತೆ  ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *