March 6, 2026
000003

ಹಿರಿಯೂರು:

ನಗರದ ನೆಹರೂ ಕ್ರೀಡಾಗಂಣ ರಾಜ್ಯಮಟ್ಟದ  ಹೊನಲು-ಬೆಳಕಿನ ಕಬ್ಬಡಿ ಟೂರ್ನಿ ಪ್ರಯುಕ್ತ  ವಿದ್ಯುತ್ ದೀಪಾಲಂಕಾರ, ಬೃಹತ್ ಎಲ್.ಇ.ಡಿ.ಟಿ. ಪರದೆಗಳೊಂದಿಗೆ  ಝಗಮಗಿಸುತ್ತಿದೆ. ಇದನ್ನು  ಕಣ್ತುಂಬಿಕೊಳ್ಳುವ  ಸುವರ್ಣಾವಕಾಶ ತಾಲ್ಲೂಕಿನ ಜನರಿಗೆ ಒದಗಿದೆ ಎಂಬುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್  ಅವರು ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ  ಶುಕ್ರವಾರ ರಾತ್ರಿ ನ್ಯೂ ಡೈಮಂಡ್  ಸ್ಪೋರ್ಟ್ಸ್  ಕ್ಲಬ್ ನ 40ನೇ ವಾರ್ಷಿಕೋತ್ಸವದ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರ ನೇತೃತ್ವದಲ್ಲಿ  ಹಮ್ಮಿಕೊಂಡಿರುವ  ರಾಜ್ಯಮಟ್ಟದ ಹೊನಲು-ಬೆಳಕಿನ ಕಬ್ಬಡಿ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯೂ ಡೈಮಂಡ್  ಕ್ಲಬ್ ರಾಜ್ಯ, ರಾಷ್ಟ್ರೀಯ ಕೊಕ್ಕೊ, ಕಬ್ಬಡಿ ಟೂರ್ನಿಗಳನ್ನು  ಆಯೋಜಿಸುತ್ತಿದೆ. ಇನ್ನು ಮುಂದೆ  ಸಚಿವ ಡಿ.ಸುಧಾಕರ್ ಅವರ ನೇತೃತ್ವದಲ್ಲಿ ಪ್ರತಿ ವರ್ಷ  ತೇರುಮಲ್ಲೇಶ್ವರ ಜಾತ್ರೆ ಸಂದರ್ಭದಲ್ಲಿ ರಾಜ್ಯ-ರಾಷ್ಟ್ರ ಮಟ್ಟದ ಕೊಕ್ಕೊ, ಕಬ್ಬಡಿ ಟೂರ್ನಿಗಳನ್ನು  ಆಯೋಜಿಸಲು ನೆರವು ನೀಡುತ್ತೇವೆ ಎಂಬುದಾಗಿ ಅವರು  ಭರವಸೆ ನೀಡಿದರು.ಹೇಳಿದರು.

ಕ್ಲಬ್ ನ ಅಧ್ಯಕ್ಷರಾದ ಹೆಚ್.ಬಿ.ಯೋಗಾನಂದ್ ಅವರು ಮಾತನಾಡಿ ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯಮಟ್ಟದ ಟೂರ್ನಿ ಆಯೋಜಿಸಿದ್ದೇವೆ. ಹಿರಿಯೂರು ತಾಲ್ಲೂಕಿನಲ್ಲಿ ಕ್ರೀಡಾ ಪ್ರೇಮಿಗಳಿಗೆ, ಕ್ರೀಡೆಗೆ ಪ್ರೋತ್ಸಾಹ ನೀಡುವವರಿಗೆ  ಕೊರತೆ ಇಲ್ಲ. ಸಚಿವ ಸುಧಾಕರ್ ನಮ್ಮ ಬೆನ್ನಿಗೆ ನಿಂತಿದ್ದಾರೆ. ದಾನಿಗಳ ನೆರವು ದೊರೆತಿದೆ. ಎಂದರಲ್ಲದೆ,

ಲೀಗ್ ಕಂ ನಾಕೌಟ್ ಮಾದರಿಯಲ್ಲಿ  ನಡೆಯುವ ಟೂರ್ನಿಗೆ ಶುಕ್ರವಾರ ಸಂಜೆವರೆಗೆ 18 ತಂಡಗಳು ಆಗಿಸಿವೆ. ಶನಿವಾರ ಬೆಳಗ್ಗೆಯಿಂದ  ನಿರಂತರವಾಗಿ ಪಂದ್ಯಗಳನ್ನು  ನಡೆಸುತ್ತೇವೆ ಎಂಬುದಾಗಿ ಅವರ ಹೇಳಿದರು.

ಇದೇ  ಸಂದರ್ಭದಲ್ಲಿ ಮನವಿ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಮಾನಸಮಂಜುನಾಥ್, ನಗರಸಭೆ ಮಾಜಿ ಉಪಾಧ್ಯಕ್ಷೆ ಮಂಜುಳಾ,  ಮಾಜಿ ಸದ್ಯರಾದ  ಜಗದೀಶ್, ಸುರೇಖಾಮಣಿ, ಗುರುಪ್ರಸಾದ್ , ಲಿಂಗರಾಜು ಅವರು ಮಾತನಾಡಿದರು.

ಈ  ಕಾರ್ಯಕ್ರಮದಲ್ಲಿ ಮುಖಂಡರಾದ ರವಿ, ಮಧು, ಆರೋಗ್ಯಸ್ವಾಮಿ, ಹೆಚ್.ಎನ್. ವೆಂಕಟೇಶ್, ದಿವಾಕರ್, ನರಸಿಂಹಮೂರ್ತಿ, ಜ್ಞಾನೇಶ್, ಸಾದಿಕ್, ಅಸ್ಗರ್ ಅಹಮದ್, ಹರೀಶ್, ಹುಲಗಿ ಮಿಲ್ ಸುರೇಶ್, ಎಂಜಿನಿಯರ್ ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *