
ಹಿರಿಯೂರು:
ಸ್ವಚ್ಚತೆ ನಗರಸಭೆ ಪೌರಕಾರ್ಮಿರಿಗೆ ಮಾತ್ರವಲ್ಲ. ಪ್ರತಿದಿನ ಕೋರ್ಟ್ ಸಿಬ್ಬಂದಿಯೂ ಸಹ ಸ್ವಚ್ಚತೆಯ ಬಗ್ಗೆ ಗಮನ ಹರಿಸಬೇಕು ಮತ್ತು ಪೌರಕಾರ್ಮಿಕರಿಗೆ ತಮ್ಮ ತಮ್ಮ ಆರೋಗ್ಯ, ಸುರಕ್ಷತೆಯ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂಬುದಾಗಿ ಹಿರಿಯ ನ್ಯಾಯಾಧೀಶರಾದ ಸುಜಾತಸುವರ್ಣ ಅವರು ಹೇಳಿದರು.
ನಗರದ ಕೋರ್ಟ್ ಆವರಣದಲ್ಲಿ ಮಾನ್ಯ ನ್ಯಾಯಾಧೀಶರವರ ಅಧ್ಯಕ್ಷ್ಯತೆಯಲ್ಲಿ ಮತ್ತು ವಕೀಲರ ಸಂಘ, ನಗರಸಭೆ ವತಿಯಿಂದ ರಾಷ್ಟ್ರೀಯ ಸ್ವಚ್ಚತಾ ದಿನ ಮತ್ತು ಸರ್ವೋದಯ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹೆಚ್.ಡಿ.ಶ್ರೀಧರ್, ವಕೀಲ ಸಂಘದಅಧ್ಯಕ್ಷರಾದ ರಂಗಸ್ವಾಮಿ, ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಹಿರಿಯ ಆರೋಗ್ಯ ನಿರೀಕ್ಷಕರಾದ ಹೆಚ್.ಟಿ. ಸುನೀಲ್ ಕುಮಾರ್, ವೈ.ಎಸ್.ಸಂಧ್ಯಾ, ಕಿರಿಯ ಆರೋಗ್ಯ ನಿರೀಕ್ಷಕರಾದ ಅಶೋಕ್ ಕುಮಾರ್, ಎಸ್.ಮಹಾಲಿಂಗರಾಜು, ನಯಾಜ್, ಶರೀಫ್, ದಫ್ಫೇದಾರ್ ಗಳು, ಪೌರಕಾರ್ಮಿಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
