March 6, 2026
0002

ಹಿರಿಯೂರು:

ತಾಲ್ಲೂಕಿನ  ಸಿ.ಎನ್. ಮಾಳಿಗೆ ಸರ್ಕಾರಿ  ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು  ಶೀಘ್ರವೇ ಮುಗಿಸುವಂತೆ  ಕರ್ನಾಟಕ ರಾಜ್ಯ  ಕಾರ್ಮಿಕ  ಪರಿಷತ್ತು ತಾಲ್ಲೂಕು ಅಧ್ಯಕ್ಷರಾದ  ಪರಮೇಶ್ ಅವರು ಒತ್ತಾಯಿಸಿದ್ದಾರೆ.

ನೆಲಕ್ಕೆ ಟೈಲ್ಸ್ ಅಳವಡಿಕೆ ಮಾಡದೆ, ಗೋಡೆಗೆ ಬಣ್ಣ  ಬಳಿಯದೆ ಕಬ್ಬಿಣದ ಕಿಟಕಿ ಬಾಗಿಲುಗಳಿಗೆ  ಬಣ್ಣ ಮಾಡಿಸದೆ ಇರುವುದರಿಂದ  ತುಕ್ಕು ಹಿಡಿಯುವ ಹಂತಕ್ಕೆ ಬಂದಿದೆ.

ನರೇಗಾ ಯೋಜನೆಯಡಿ ಮಂಜೂರಾದ  ಹೈಟೆಕ್ ಶೌಚಾಲಯದ ಅಂದಾಜು ಕಾಮಗಾರಿ  ಪ್ರಾರಂಭದ ದಿನಾಂಕ ನಮೂದಿಸಿಲ್ಲ. ಕಾಮಗಾರಿ ಮುಗಿದ  ದಿನಾಂಕ  ನಮೂದಿಸದೆ ತರಾತುರಿಯಲ್ಲಿ  ಬಿಲ್ಲು  ಮಾಡಿಕೊಂಡ ಗುತ್ತಿಗೆದಾರ ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವುದು ನಿಜಕ್ಕೂ ದುರ್ದೈವದ ಸಂಗತಿ.

ಸುಮಾರು 5ಲಕ್ಷ  ಕಾಮಗಾರಿ ಇದಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ  ಕಳಪೆಗುಣಮಟ್ಟದ ಕೆಲಸಗಳನ್ನು ನೋಡಬಹುದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ನೆನೆಗುದಿಗೆ ಬಿದ್ಧಿರುವ  ಕಾಮಗಾರಿ ಪೂರ್ಣಗೊಳಿಸಿ ವಿದ್ಯಾರ್ಥಿನಿಯರ ಬಳಕೆಗೆ  ಅನುಕೂಲ ಮಾಡಿಕೊಡಬೇಕು ಎಂಬುದಾಗಿ ಪರಮೇಶ್ ಒತ್ತಾಯಿಸಿದ್ದಾರೆ.

About The Author

Leave a Reply

Your email address will not be published. Required fields are marked *