
ಹಿರಿಯೂರು :
ಧನುರ್ಮಾಸದಲ್ಲಿ ಕೊನೆಯ ಶುಕ್ರವಾರದಂದು ಶ್ರೀವಾಸವಿದೇವಿಗೆ ಗೋದಾದೇವಿ ಅಲಂಕಾರ ಮಾಡುವ ಮೂಲಕ ಲೋಕಕಲ್ಯಾಣಕ್ಕಾಗಿ ವಿಶೇಷ ರೀತಿಯಲ್ಲಿ ಕಬ್ಬಿನ ಆರತಿ ಪೂಜೆ ನಡೆಸಲಾಗುತ್ತಿದೆ ಎಂಬುದಾಗಿ ಆರ್ಯವೈಶ್ಯ ಮಹಿಳಾ ಮಂಡಳಿಅಧ್ಯಕ್ಷರಾದ ರುಕ್ಮಿಣಿ ಗೋವಿಂದರಾಜ್ ಹೇಳಿದರು.
ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ಆರ್ಯವೈಶ್ಯ ಮಂಡಳಿ ಸಹಕಾರದಲ್ಲಿ ಆರ್ಯವೈಶ್ಯ ಮಹಿಳಾ ಮಂಡಳಿಯಿಂದ ಆಯೋಜಿಸಲಾಗಿದ್ದ ಶ್ರೀವಾಸವಿಗೆ ಗೋದಾದೇವಿ ಅಲಂಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರೀರಾಜರಾಜೇಶ್ವರಿಯನ್ನು ಭಕ್ತಿ ಪೂರ್ವಕವಾಗಿ ಎಲ್ಲರೂ ಸೇರಿ ಕಬ್ಬಿನ ಆರತಿಯನ್ನು ಮಾಡುತ್ತ ಲೋಕ ಕಲ್ಯಾಣವಾಗಿಸಲು ಎಲ್ಲರಿಗೂ ಆಯುರಾರೋಗ್ಯ ಆಯುಷ್ಯಗಳನ್ನು ನೀಡಲಿ ಮತ್ತು ನಾಡು ಸುಭಿಕ್ಷವಾಗಿರಲಿ ಎಂಬುದಾಗಿ ಶ್ರೀರಾಜರಾಜೇಶ್ವರಿಯಲ್ಲಿ ಪ್ರಾರ್ಥಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಹಿಳಾ ಮಂಡಳಿ ಕಾರ್ಯದರ್ಶಿ ಶ್ರೀಮತಿ ರೂಪನಾಗೇಶ್ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ ಹಾಗೂ ಆರ್ಯವೈಶ್ಯ ಮಹಿಳಾ ಮಂಡಳಿ ಪದಾಧಿಕಾರಿಗಳು, ಆರ್ಯವೈಶ್ಯ ಸಮಾಜದ ಎಲ್ಲಾ ಮಹಿಳೆಯರು ಭಾಗವಹಿಸಿದ್ದರು.
