
ಹಿರಿಯೂರು:
ರೈತರು ಉತ್ತಮ ತಳಿ ಬೀಜಗಳನ್ನು ಆಯ್ಕೆ ಮಾಡಿ ತಮ್ಮ ಜಮೀನಿಗೆ ಬಿತ್ತನೆ ಮಾಡಬೇಕು ಎಂಬುದಾಗಿ ಕೃಷಿಕ ಸಮಾಜದ ಜಿಲ್ಲಾ ನಿರ್ದೇಶಕರಾದ ಕಂದಿಕೆರೆ ಕೆ.ಜಗದೀಶ ಅವರು ಹೇಳಿದರು.
ನಗರದ ಕೃಷಿ ಇಲಾಖೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳೆ ಸ್ಥಿತಿ ರೋಗ ಲಕ್ಷಣ ಹಾಗೂ ಹವಮಾನಕ್ಕೆ ತಕ್ಕಂತೆ ಔಷಧೀಯ ಲವಣಾಂಶ ಮತ್ತು ಪೋಷಕಾಂಶಗಳನ್ನು ನೀಡುವುದರ ಮುಖಾಂತರ ಅಧಿಕಾರಿಗಳು ಕಾಲಕಾಲಕ್ಕೆ ಕೊಡುವ ಸಲಹೆ ಮಾರ್ಗದರ್ಶನ ಪಡೆದು ಬೆಳೆಗಳನ್ನು ಬೆಳೆಯಬಹುದು.
ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯಬೇಕು. ಬೆಳೆದ ಬೆಳೆಗಳ ಮೌಲ್ಯವರ್ಧನೆ ಬ್ರಾಂಡಿಗ್ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ರೈತರು ಉತ್ಪಾದಕ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದು ಸದುಪಯೋಗಪಡಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.
ಸರ್ಕಾರ ನೀಡಿರುವ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ರೈತರು ನೋಂದಣಿ ಮಾಡಿಸಿಕೊಂಡು ಲಾಭವನ್ನು ಪಡೆಯುವಂತೆ ರೈತರಲ್ಲಿ ಮನವಿ ಮಾಡಿದರು. ತಾಲ್ಲೂಕಿಗೆ ಹಲವು ಹೊಸ ಯೋಜನೆಗಳು ಜಾರಿಯಾಗಿರುವ ಬಗ್ಗೆ ಮಾಹಿತಿ ನೀಡಿ ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ರೈತರಿಗೆ ಅವರು ಹೇಳಿದರು.
ಸಹಾಯಕ ಕೃಷಿ ಅಧಿಕಾರಿಗಳು ಜೆ.ಅಶೋಕ್ ಪ್ರಾಸ್ತಾವಿಕವಾಗಿ ಮಾತನಾ ರೈತ ದಿನಾಚರಣೆ ಮತ್ತು ಯೋಜನೆಗಳ ಮಾಹಿತಿ ನೀಡಿದರು.ನಿವೃತ್ತ ಕೃಷಿ ಅಧಿಕಾರಿ ಶಾಂತವೀರಪ್ಪ ಅವರು ಮಾತನಾಡಿ ರೈತ ದಿನಾಚರಣೆ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮನೋಹರ್ ಕೃಷಿ ವಿಜ್ಞಾನಿಗಳು ಮಾತನಾಡಿ ರೈತರಿಗೆ ಮಾಹಿತಿ ನೀಡಿದರು.

ರೈತ ಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಅವರು ಮಾತನಾಡಿ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಹೊಸದಾಗಿ ತಾಲ್ಲೂಕಿಗೆ ಬಂದಿದ್ದು,ರೈತರ ಬಗ್ಗೆ ಕಾಳಜಿ ವಹಿಸಿ ಬಂದ ರೈತರಿಗೆ ಸ್ಪಂದಿಸಿ ಸಲಹೆ ಸೂಚನೆ ನೀಡಿ ಉತ್ತಮ ಕಾರ್ಯಮಾಡುವಂತೆ ಅವರು ಹೇಳಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜ ಅಧ್ಯಕ್ಷರು ಸಿ.ಕಾಂತರಾಜು ಅವರು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ತೋಟಗಾರಿಕ ಉಪನಿರ್ದೇಶಕರಾದ ಶ್ರೀನಿವಾಸ, ಪಿ.ಎಸ್.ಪಾತಣ್ಣ ನಿವಾಸ, ಫಕೃದ್ಧೀನ್ , ತಿಪ್ಪೇಸ್ವಾಮಿ, ನಿರ್ದೇಶಕರು, ತಾಲ್ಲೂಕು ಅಧ್ಯಕ್ಷರು, ರೈತ ಸಂಘದ ಸಿದ್ಧರಾಮಣ್ಣ, ಗುಡಾರಿಕೃಷ್ಣಪ್ಪ, ರೈತ ಮುಖಂಡರು, ತಾಲ್ಲೂಕಿನ ಕೃಷಿ ಅಧಿಕಾರಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
