March 6, 2026
0000001

ಹಿರಿಯೂರು :

ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ವ್ಯಾಸಿನೇಷನ್ ಅನ್ನು ಹಾಕಿಸುವುದು ತುಂಬಾ ಮುಖ್ಯ, ಇದು ಬಹಳ ವರ್ಷಗಳಿಂದಲೂ ಇದೆ, ಆದರೆ ಇತ್ತೀಚಿಗೆ ಇದು ಹೆಚ್ಚು ಪ್ರಚಾರಕ್ಕೆ ಬರುತ್ತಿದೆ ಹೆಣ್ಣು ಮಕ್ಕಳು 10 ವರ್ಷದಿಂದ 46 ವರ್ಷದ ವಯಸ್ಸಿನವರು ಈ ಹೆಚ್.ಪಿ.ವಿ ಚುಚ್ಚುಮದ್ದನ್ನು ಹಾಕಿಸಿಕೊಳ್ಳುವುದು ತುಂಬಾ ಅವಶ್ಯಕವಿದೆ ಎಂಬುದಾಗಿ ಡಾ.ಶ್ರೀಮತಿ ಲತಾ ರಾಮಚಂದ್ರಪ್ಪ ಹೇಳಿದರು.

ನಗರದ ಸಂಜೀವಿನಿ ಆಸ್ಪತ್ರೆಯಲ್ಲಿ  ಇನ್ಹರ್ ವ್ಹೀಲ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಚ್.ಪಿ.ವಿ ವ್ಯಾಕ್ಸಿನೇಷನ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೊರದೇಶಗಳಲ್ಲಿ ಈ ಚುಚ್ಚುಮದ್ದು ಅತ್ಯಂತ ದುಬಾರಿಯಾಗಿದ್ದು, ನಮ್ಮ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಇದನ್ನು ಹಾಕಲಾಗುತ್ತದೆ, ಹೆಣ್ಣು ಮಕ್ಕಳು ಪ್ರತಿಯೊಬ್ಬರು ಈ ಚುಚ್ಚುಮದ್ದನ್ನು ಹಾಕಿಸಿಕೊಳ್ಳುವುದು ಅತ್ಯವಶ್ಯಕ ರೋಗ ಬಂದಾಗ ಎಚ್ಚೆತ್ತುಕೊಳ್ಳುವುದಕ್ಕಿಂತ ರೋಗ ಬರದಂತೆ ಜಾಗೃತಿ ವಹಿಸುವುದು ತುಂಬಾ ಮುಖ್ಯ ಎಂಬುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಕುಮಾರಿ ವರ್ಷಿತ ಅವರಿಗೆ ಇನ್ಹರ್ ವ್ಹೀಲ್ ಕ್ಲಬ್ ವತಿಯಿಂದ ಉಚಿತವಾಗಿ ಹೆಚ್.ಪಿ.ವಿ ವ್ಯಾಕ್ಸಿನೇಷನ್ ಅನ್ನು ಕೊಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ರೋಷಿಣಿ ಮಹೇಶ್ ಹಾಗೂ ಕಾರ್ಯದರ್ಶಿ ಸರ್ವ ಮಂಗಳ ರಮೇಶ್ ಹಾಗೂ ಪ್ರೇಮಾಶ್ಯಾಮಲಾ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *