March 4, 2026
00001

ಹಿರಿಯೂರು:

ಗ್ರಾಮೀಣ ಆರ್ಥಿಕತೆ ಬಲಪಡಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅತ್ಯಂತ  ಮಹತ್ವ, ಈ ನಿಟ್ಟಿನಲ್ಲಿ ಇಂತಹ ಮೂಲಸೌಕರ್ಯ  ಅಭಿವೃದ‍್ದಿ ಕಾರ್ಯಗಳು ರೈತ ಸಮುದಾಯಕ್ಕೆ ದಿಟ್ಟ ಬೆಂಬಲವಾಗಲಿವೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು  ಹೇಳಿದರು.

ತಾಲ್ಲೂಕಿನ ಐಮಂಗಲ ಹೋಬಳಿಯ ಭರಂಪುರ ಪ್ರಾಥಮಿಕ ಕೃಷಿ ಪತ್ತಿನ  ಸಹಕಾರ ಸಂಘ, ಐಮಂಗಲ ನೂತನ ಕಟ್ಟಡವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಸಂಘದ ಅಭಿವೃದ್ಧಿಗೆ ಆಡಳಿತ ಮಂಡಳಿ  ಒಟ್ಟುಗೂಡಿ ಉತ್ತಮ  ಸ್ಥಾನಕ್ಕೆ  ಕೊಂಡೊಯ್ಯಬೇಕೆಂದು ಎಂದರಲ್ಲದೆ,ನೂತನ ಕಟ್ಟಡವು ಸಂಘದ  ಆಡಳಿತ ಕಾರ್ಯಕ್ಷಮತೆ ಹೆಚ್ಚಿಸಿ, ರೈತರು ಹಾಗೂ ಸದಸ್ಯರಿಗೆ ಇನ್ನಷ್ಟು ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು, ರೈತರು, ಅಧಿಕಾರಿ ವರ್ಗದವರು ಹಾಗೂ  ಮುಖಂಡರುಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *