March 6, 2026
00004

ಹಿರಿಯೂರು:

ಜೀವನದಲ್ಲಿ  ಶಿಕ್ಷಣ ಮಹತ್ವದ ಘಟ್ಟವಾಗಿದೆ. ವಿದ್ಯಾಭ್ಯಾಸ ಜೀವನದ ಅವಿಭಾಜ್ಯ ಅಂಗವಾಗಿದೆ. ಏಕಾಗ್ರತೆ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅತ್ಯಗತ್ಯ. ಜೀವನವನ್ನು ರೂಪಿಸಿಕೊಳ್ಳವಲ್ಲಿ  ಶಿಕ್ಷಣ ಅತ್ಯಮೂಲ್ಯವಾಗಿದೆ ಎಂಬುದಾಗಿ ಸಹಾಯಕ ಗವರ್ನರ್ ಕಿರಣ್ ಅವರು ಹೇಳಿದರು.

ನಗರದ ಮೋಕ್ಷಗುಂಡಮ್ ವಿಶ್ವೇಶ್ವರಯ್ಯ ವಿದ್ಯಾಮಂದಿರ ಶಾಲೆಯಲ್ಲಿ  ಹಮ್ಮಿಕೊಳ್ಳಲಾಗಿದ್ದ ಕಿರಣ್ ಇವರಿಂದ “ಅಧ್ಯಯನದಲ್ಲಿ ಏಕಾಗ್ರತೆ” ಬಗ್ಗೆ ಅರಿವು  ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿದರೆ ವಿದ್ಯಾರ್ಥಿ ಜೀವನದಲ್ಲಿ  ಸಾಧನೆಯತ್ತ ಮುನ್ನಡೆಯಬಹುದು  ಮತ್ತು ಮಹಾನ್ ವ್ಯಕ್ತಿಗಳಾದ ಸ್ವಾಮಿವಿವೇಕಾನಂದರ  ಸಾಧನೆಗಳು  ಮತ್ತು ಸರ್.ಎಂ.ವಿಶ್ವೇಶ್ವರಯ್ಯ ನವರ ಗುರಿಗಳ ಬಗ್ಗೆ ವಿವರಿಸಿದರು. ಅಲ್ಲದೆ,

ಸಮಸ್ಯೆಗಳು ಬಂದಾಗ ಎದೆಗುಂದದೆ ಎದುರಿಸಬೇಕು. ವಿದ್ಯಾಭ್ಯಾಸ ಒಂದು ಅಸ್ತ್ರ  ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ತಂದೆ-ತಾಯಿ, ಗುರುಗಳಿಗೆ ವಿಧೇಯರಾಗಿರಿ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಅಧ್ಯಕ್ಷರಾದ ವರುಣ್, ಕಿರಣ್, ಶಾಲೆಯ ಮುಖ್ಯ ಶಿಕ್ಷಕ ಜಿ.ತಿಪ್ಪೇಸ್ವಾಮಿ ಗೌರವ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಹೆಚ್.ಎಂ. ಬಸವರಾಜ್, ಮುಖ್ಯ ಶಿಕ್ಷಕ ಜಿ.ತಿಪ್ಪೇಸ್ವಾಮಿ, ಹಿರಿಯ ಶಿಕ್ಷಕಿ ಜಿ.ಪದ್ಮಜಾ, ಶಾಲಾ ಶಿಕ್ಷಕ-ಶಿಕ್ಷಕಿಯರು  ಸೇರಿದಂತೆ   ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *