June 1, 2026
00003

ಹಿರಿಯೂರು:

ದೇಶ ನಿರ್ಮಾಣ ಕ್ಷೇತ್ರದಲ್ಲಿ ಸೈನಿಕರು,  ರೈತರಂತೆ ಶಿಕ್ಷಕರದ್ದು ಕೂಡ ಮಹತ್ವಪೂರ್ಣವಾದ ಸ್ಥಾನವಿದೆ ಎಂಬುದಾಗಿ ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅವರು ಹೇಳಿದರು.

ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ  ನೆಹರು ಗ್ರಾಮಾಂತರ ಪ್ರೌಢಶಾಲೆಯ ನೂತನ ಕಟ್ಟಡದ  ಉದ್ಘಾಟನೆ ಮತ್ತು ಗುರುವಂದನಾ ಸಮಾರಂಭದಲ್ಲಿ  ಪಾಲ್ಗೊಂಡು ಅವರು ಮಾತನಾಡಿದರು.

ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ , ಪರಂಪರೆಯಲ್ಲಿ ಶಾಶ್ವತವಾದ ಸ್ಥಾನವ ಹೊಂದಿದೆ.ಮಕ್ಕಳ ಪ್ರೀತಿ ಶಿಕ್ಷಕರಿಗೆ ಪ್ರಧಾನವಾಗಬೇಕು. ಬೇಧ-ಭಾವಗಳು  ತೊಲಗಿ ಸಾಧನೆಯು ರೂಪುಗೊಳ್ಳಬೇಕು. ಗೌರವಿಸುವ, ಬೆಳೆಸುವ, ಗುರುತಿಸುವ ಪ್ರಕ್ರಿಯೆಗಳು ನಿರಂತರವಾಗಿರಬೇಕು ಎಂಬುದಾಗಿ ಅವರು ಹೇಳಿದರು.

ಜ್ಞಾನಕ್ಕೆ ಸಮಾನವಾದ ವಸ್ತು ಯಾವುದು ಇಲ್ಲ. ಶಿಕ್ಷಣದ ಅವಶ್ಯಕತೆಗೆ ಶಿಕ್ಷಕರ, ಪೋಷಕರ ಪಾತ್ರ ಸಮಾನವಾಗಿದೆ. ಮಕ್ಕಳಲ್ಲಿ ನೈತಿಕ ಪಾಠಗಳನ್ನು ಬಿತ್ತಬೇಕು. ತಂದೆ-ತಾಯಿ ಆದರ್ಶ ಮತ್ತು ಕಲಿಕೆಯ ಪ್ರೀತಿಗೆ ಒತ್ತಾಸೆಯಾಗಿ ನಿಲ್ಲಬೇಕಿದೆ.

ಹಳ್ಳಿ ಭಾಗದ ಜನರ ಶಿಕ್ಷಣದ ಅವಶ್ಯಕತೆ  ಅರಿತು ಅಂದು ಆರಂಭವಾದ ನೆಹರು ಗ್ರಾಮಾಂತರ ಪ್ರೌಢಶಾಲೆ ಉತ್ತಮ ಶಿಕ್ಷಣ ನೀಡುವ ಮೂಲ ಮಕ್ಕಳ ಬದುಕನ್ನು ಹಸನು ಮಾಡಲು ಕುಟುಂಬಕ್ಕೆ ನೆರವಾಗಲು ಜೊತೆಯಾಗಿದೆ. ಎಂದರಲ್ಲದೆ, 

ಶ್ರೀ ಮಠವು ಸರ್ಕಾರದ ಜೊತೆ ಸೇರಿ ಶಿಕ್ಷಣಕ್ಕೆ ಆದ್ಯತೆ ನೀಡಿದೆ.ನಾಡಿನಲ್ಲಿ ಸಾಕ್ಷರತೆ ಪ್ರಮಾಣ ಮತ್ತು ಶಿಕ್ಷಣಕ್ಕೆ ನಾಡಿನ ಮಠ ಮಾನ್ಯಗಳ  ಕೊಡುಗೆಯಾಗಿದೆ.ಅಕ್ಷರದ ಜೊತೆ ಲಕ್ಷಾಂತರ ಮನಸ್ಸುಗಳನ್ನು ಬೆಸೆದಿದೆ. ಸವಲತ್ತುಗಳು ಕಡಿಮೆ ಇದ್ದ ಕಾಲದಲ್ಲಿ ಸಂಸ್ಕಾರಗಳು ಉತ್ತಮವಾಗಿದ್ದವು ಎಂಬುದಾಗಿ ಅವರು ಹೇಳಿದರು.

ಎಲ್ಲಾ ಸವಲತ್ತುಗಳು ದೊರಕಿದರೂ ಬದುಕುಗಳು ದುಸ್ತರವಾಗಿವೆ. ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೋಹದಡಿ ಕನ್ನಡ ಶಾಲೆಗಳು ಹಿಂದುಳಿದಿಲ್ಲ. ಕನ್ನಡದಲ್ಲಿ ಐ.ಎ.ಎಸ್, ಐ.ಪಿ.ಎಸ್. ಮಾಡಿರುವ ನಿದರ್ಶನಗಳು ನಮ್ಮ ಮುಂದಿವೆ ಎಂಬುದಾಗಿ ಅವರು ಹೇಳಿದರು.

ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು  ಮಾತನಾಡಿ ಸರ್ಕಾರವು ಮಾಡಲಾಗದ ಶಿಕ್ಷಣ ಸೇವೆಯನ್ನು ಸಿದ್ಧಗಂಗಮಠವು ಮಾಡಿದೆ. ನಾಡಿಗೆ ಮತ್ತು ದೇಶಕ್ಕೆ ಹಲವಾರು ಜ್ಞಾನಿಗಳನ್ನು ಕೊಡುಗೆಯಾಗಿ ನೀಡಿದೆ. ನನ್ನ ಕ್ಷೇತ್ರದಲ್ಲಿ ಸಿದ್ಧಗಂಗ ಕ್ಷೇತ್ರದ ಶಾಲೆ ಹೊಂದಿರುವುದು ಹೆಮ್ಮೆ ಅನಿಸುತ್ತಿದೆ ಎಂಬುದಾಗಿ ಅವರು ಹೇಳಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಕೆ.ಎಸ್.ನವೀನ್ ಅವರು ಮಾತನಾಡಿ  ಭವಿಷ್ಯದ ವಿದ್ಯಾರ್ಥಿಗಳಿಗೆ  ಸಕಲ ಸೌಲಭ್ಯಗಳ ಶಾಲೆಯಾಗಿದೆ. ಶ್ರೀಗಳವರು ಶಿಕ್ಷಣಕ್ಕೆ ಆದ್ಯತೆ ಕೊಟ್ಟು ಶಿಸ್ತು ಮತ್ತು ಅನನ್ಯ ಕಾರ್ಯಗಳ ಮೂಲಕ ಜಗದಗಲದಲ್ಲಿ  ನಾಡಿನ ಕೀರ್ತಿಯನ್ನು ಬೆಳಗಿಸಿದ್ದಾರೆ ಎಂಬುದಾಗಿ ಅವರು ಹೇಳಿದರು.

ಆದಿಜಾಂಬವ ಅಭಿವೃದ‍್ದಿ ನಿಗಮದಅಧ್ಯಕ್ಷರಾದ ಜಿ.ಎಸ್. ಮಂಜುನಾಥ್ ಅವರು ಮಾತನಾಡಿ  ಕರೋನಾದ  ಕರಾಳ ದಿನಗಳಲ್ಲಿ ಸಿದ್ಧಗಂಗ ಮಠ ನಾಡಿನ ಬಡ ಮಕ್ಕಳಿಗೆ ಅನ್ನ ಹಾಕಿ ಮಾದರಿಯಾಗಿದೆ. ಹಿರಿಯ ಶ್ರೀಗಳವರು ಹಾಕಿಕೊಟ್ಟಿರುವ  ಮಾರ್ಗದಲ್ಲಿ ಮುನ್ನಡೆಯುತ್ತಿರುವ ಸಿದ್ಧಗಂಗ ಮಠ ನಮಗೆಲ್ಲಾ ಸ್ಪೂರ್ತಿಯಾಗಿದೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎಂ.ಬಸವರಾಜಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದ ದೇವರಾಜು,  ಟಿ.ತ್ರಿಯಂಕಮೂರ್ತಿ, ಚಮನ್ ಷರೀಫ್, ಡಾ.ಜೆ.ಆರ್.ಸುಜಾತ, ಆಸಿಫ್  ಅಲಿ, ಕಿರಣ್, ಪಟ್ರೇಹಳ್ಳಿ ಮಹಮ್ಮದ್ ಫಕ್ರುದ್ಧೀನ್, ಯರಗುಂಟೇಶ್ವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *