March 6, 2026
0002

ಹಿರಿಯೂರು:

ಉತ್ತಮ ರಸ್ತೆ ನಿರ್ಮಾಣವು  ಸ್ಥಳೀಯ ನಿವಾಸಿಗಳಿಗೆ ಸುಗಮ ಸಂಚಾರ, ಸುರಕ್ಷತೆ ಹಾಗೂ ಮೂಲಸೌಕರ್ಯಗಳಲ್ಲಿನ ಸುಧಾರಣೆಗೆ  ಸಾಧ್ಯವಾಗಲಿದೆ ಎಂಬುದಾಗಿ  ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.

ತಾಲ್ಲೂಕಿನ ಆದಿವಾಲಫಾರಂ, 2ಎ.ಕೆ.ಕಾಲೋನಿಯಲ್ಲಿ  ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆಯನ್ನು ನೆರವೇರಿಸಿ ಅವರು   ಮಾತನಾಡಿದರು.

ಸಾರ್ವಜನಿಕರ ಅಗತ್ಯಗಳಿಗೆ ಸ್ಪಂದಿಸಿ ಅಭಿವೃದ‍್ಧಿ  ಕಾರ್ಯಗಳನ್ನು ವೇಗವಾಗಿ  ಅನುಷ್ಟಾನಗೊಳಿಸುವ  ನಮ್ಮ ಬದ್ಧತೆ  ಮುಂದುವರೆಯುತ್ತದೆ. ಮೂಲಭೂತ ಸೌಕರ್ಯಗಳಿಗೆ ಹರಚ್ಚು ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆದಿಜಾಂಬವ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್ , ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *