March 2, 2026
0001

ಹಿರಿಯೂರು :

ನಗರದ 100 ಫೀಟ್  ರಸ್ತೆಯಲ್ಲಿ ಮರಗಳ ಟ್ರಿಮ್ಮಿಂಗ್ ಕೆಲಸವನ್ನು ಮಾಡಿ ಸಾರ್ವಜನಿಕರಿಗೆ ಹಾನಿ ಉಂಟು ಮಾಡುತ್ತಿದ್ದ ಮರದ ಕೊಂಬೆ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದ್ದ ಮರಗಳ ಟ್ರಿಮ್ ಮಾಡಿ ಫೂಟ್ ಪಾತ್ ಸಂಪೂರ್ಣವಾಗಿ ತಿರುಗಿಸಿ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಹೇಳಿದರು.

ನಗರದ ನಗರಸಭೆ ವ್ಯಾಪ್ತಿಯ ನಗರದ 100 ಫೀಟ್ ರಸ್ತೆಯಲ್ಲಿ ಸ್ವಚ್ಛತಾ ಇಸೇವಾ ಕಾರ್ಯಕ್ರಮದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ “ನಮ್ಮಚಿತ್ತ ಸ್ವಚ್ಛತೆಯತ್ತ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ,  ಹಿರಿಯ ಮತ್ತು ಕಿರಿಯ  ಆರೋಗ್ಯ ನಿರೀಕ್ಷಕರುಗಳಾದ ಸುನೀಲ್ ಕುಮಾರ್, ಶ್ರೀಮತಿಸಂಧ್ಯಾ ವೈ.ಎಸ್ . ಅಶೋಕ್ ಕುಮಾರ್, ಮಹಾಲಿಂಗರಾಜು, ನಯಾಜ್ ಶರೀಫ್, ದಪ್ಪೇದಾರಗಳು, ಪೌರಕಾರ್ಮಿಕರು,  02 ವಾರ್ಡ್ ಗಳ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸದಸ್ಯರುಗಳು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

About The Author

Leave a Reply

Your email address will not be published. Required fields are marked *