March 2, 2026
000003

ಹಿರಿಯೂರು: 

ನಮ್ಮ ಹಿರಿಯೂರು ತಾಲೂಕು ಸಾಹಿತ್ಯಕ್ಕೆ, ಸಂಗೀತಕ್ಕೆ, ಜಾನಪದ ಹಾಗೂ ರಂಗಕಲೆಗೆ ಅಪಾರವಾದ ಕೊಡುಗೆ ನೀಡುವ ಮೂಲಕ ಕನ್ನಡ ನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿ ಬೆಳೆಸಿದೆ ಎಂಬುದಾಗಿ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿ ಸಕ್ಕರ ಹೇಳಿದರು.

ವೇದಾವತಿ ನಗರದ ಎ.ಕೃಷ್ಣಪ್ಪ ವೃತ್ತದಲ್ಲಿ ಬಹುಮುಖಿ ಕಲಾ ಕೇಂದ್ರ ಚಿತ್ರದುರ್ಗ, ಶ್ರೀಕೃಷ್ಣ ದೇವಸ್ಥಾನ ಸಮಿತಿ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಖ್ಯಾತ ರಂಗಕರ್ಮಿ ಮಂಡ್ಯ ರಮೇಶ್ ನಿರ್ದೇಶನದ “ಸಂಸಾರದಲ್ಲಿಸಾನಿದಪ” ನಾಟಕ ಪ್ರದರ್ಶನ ಹಾಗೂ ರಂಗಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸುಮಾರು 16ನೇ ಶತಮಾನದ ಆರಂಭದಲ್ಲಿ ಮಾಯಸಂದ್ರದ ದೊರೆ ಕೇಶವನಾಯಕರು  ಹಿರಿಯೂರನ್ನು ಸ್ಥಾಪನೆ ಮಾಡಿದರು ಇದಕ್ಕೆ ಘನಪುರಿ, ಹೊನ್ನ ಹಿರಿಯೂರು ಎಂಬ ಹೆಸರು ಇತ್ತು. ಈಗ ಇದು ಹಿರಿಯೂರು ಆಗಿ ಬೆಳೆದು ರಂಗಭೂಮಿಯ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ.

1948ರಲ್ಲಿ ಸ್ಥಾಪನೆಯಾದ ವಿಜಯ ಕಲಾವಿದರು 1970ರಲ್ಲಿ ಸ್ಥಾಪನೆಯಾದ ಭಾರತಿ ಕಲಾವಿದರು, 1976ರಲ್ಲಿ ಪ್ರಾರಂಭಗೊಂಡ ಲಾವಣ್ಯ ಕಲಾವೃಂದ, 1982 ರಲ್ಲಿ ಆರಂಭವಾದ ದುರ್ಗಿಗುಡಿ ಕಲಾಸಂಘ, ಫ್ರೆಂಡ್ಸ್ ಕಲಾ ವೃಂದ ಸ್ನೇಹಸಂಪದ ಕಲಾಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರಸಿದ್ಧ ರಂಗಕಲಾವಿದರಾದ ಮಲ್ಲಪ್ಪನಳ್ಳಿಯ ಎಂ.ಆರ್.ಲಕ್ಷ್ಮಣಪ್ಪ, ಹರ್ತಿಕೋಟೆಯ ಸುಬ್ಬರಾಯ, ಜಯಮ್ಮ, ಹನುಮಕ್ಕ, ಓಬೇನಹಳ್ಳಿ  ಪಾಂಡುರಂಗ ನಾಯಕ, ಎಂ.ಎಸ್.ಅವಧಾನಿಗಳು ವೆಂಕಟೇಶಯ್ಯ

ಕೆ.ವಿ.ರಾಮಚಂದ್ರರಾವ್, ಪಾಪನಾಯಕಪಟೇಲ್, ತಿಪ್ಪೇಸ್ವಾಮಿ, ರಂಗೇನಹಳ್ಳಿಯಗಿರಿಯಣ್ಣ, ಅಮೀರ್ ಖಾನ್, ಬಿ.ವಿ. ಮಾಧವ, ಜಿ.ಡಿ ತಿಮ್ಮಯ್ಯಹರಿಯಬ್ಬೆ, ಭಾಗ್ಯಶ್ರೀ, ವಿಮಲಾಕ್ಷಿ, ರಾಜೇಶ್ವರಿ, ಮಂಜುಳಾ, ವಿಜಯಕುಮಾರಿ, ನಿರ್ಮಲ, ನಗೀನರಾವ್, ಭಾರತಿ, ಭುವನೇಶ್ವರಿ, ರೇಖಾಮಲ್ಲಪ್ಪನಹಳ್ಳಿ, ಮಹಾಲಿಂಗಯ್ಯ, ಜಿ.ಧನಂಜಯಕುಮಾರ್, ಎಚ್.ಆರ್.ಕಣ್ಣಪ್ಪ, ವಿ.ಹೆಚ್.ರಾಜು,  ಡಾ.ಎಂ.ಎನ್. ಶ್ರೀಪತಿ ಸೇರಿದಂತೆ ಹಲವಾರು ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಕಲಾವಿದರು ನಾಟಕಗಳನ್ನು ಆಡುವ ಮೂಲಕ ರಂಗಭೂಮಿಯ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.

ನಗರಸಭೆ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಎನ್.ಚಿತ್ರಜಿತ್ ಯಾದವ್ ಮಾತನಾಡಿ, ಜಾನಪದ ಕ್ಷೇತ್ರದಲ್ಲಿ ನಾಡೋಜ ಸಿರಿಯಜ್ಜಿ, ಬಿದರಿಕೆರೆ ತೋಪಜ್ಜಿ ಸಕ್ಕರದನಿಂಗಜ್ಜಿ ಕೊಡುಗೆ ನೀಡಿದ್ದು ಸೋಬಾನೆ, ಗೊರವನ ಕುಣಿತ, ತಮಟೆವಾದ್ಯ, ದೇವರನಾಮ,  ವೀರಗಾಸೆ, ಕೋಲಾಟ, ಜಾನಪದ ಕಲೆಗಳು ಸಾಂಸ್ಕೃತಿಕ ವೈವಿದ್ಯತೆಗೆ ಹೆಸರಾಗಿದೆ ಎಂದು ಹೇಳಿದರು.

ಕವಿ ಶಿವಶಂಕರ ಸೀಗೆಹಟ್ಟಿ ಮಾತನಾಡಿ, ನಾಟಕಗಳು ನಮ್ಮ ಜೀವನದ ಪ್ರತಿಬಿಂಬವಾಗಿದ್ದು, ಮನೋರಂಜನೆಯ ಜೊತೆಗೆ ಜೀವನದ ಸ್ವಾರಸ್ಯವನ್ನು ತಿಳಿಸುತ್ತದೆ, ನಾಟಕಗಳು ಬದುಕಿನ ಸಂಕಟ,ವೇದನೆ, ಸರಸ ವಿರಸಗಳ ಒಟ್ಟಾರೆಯ ಸಂವೇದನೆಯಾಗಿದೆ,  ಇಂದಿನ ಯುವಜನತೆ ನಾಟಕಗಳನ್ನು ವೀಕ್ಷಿಸುವ ಮೂಲಕ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕೃಷ್ಣದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಡಿ.ಪಾಂಡುರಂಗಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆ ಸಿರಿಗೇರಿಯ ‘ಧಾತ್ರಿ ರಂಗ ಸಂಸ್ಥೆ’ ಕಲಾವಿದರು ಸಂಸಾರದಲ್ಲಿ  ಸನಿದಪ ನಾಟಕ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಎ.ಜಿ.ತಿಮ್ಮಯ್ಯ, ಎನ್.ಲಕ್ಷ್ಮಿಕಾಂತ್, ಸಿ.ಆರ್.ಓಬಳೇಶ್, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷರಾದ  ಜೆ.ನಿಜಲಿಂಗಪ್ಪ ಬಹುಮುಖಿ ಕಲಾ ಕೇಂದ್ರ ಕಾರ್ಯದರ್ಶಿಯಾದ ಟಿ.ಮಧು ರಂಗಭೂಮಿ ಕಲಾವಿದ ಮದಕರಿಪುರದ ಟಿ.ಶ್ರೀನಿವಾಸ್ ಧಾತ್ರಿ ರಂಗ ಸಂಸ್ಥೆಯ ಸಂಚಾಲಕರಾದ ವಿಜಯ ಕುಮಾರ್, ಎಸ್.ರುದ್ರಯ್ಯ ,ಎ.ತಿಮ್ಮಪ್ಪ, ಜಿ.ಎ ಶ್ರೀನಿವಾಸ್, ಟಿ.ನಿಂಗಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *