March 2, 2026
0008

ಹಿರಿಯೂರು:

ನಗರದ ಪ್ರವಾಸಿಮಂದಿರ ವೃತ್ತದಿಂದ ವೇದಾವತಿ ಸೇತುವೆವರೆಗೆ  ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ  ಪ್ರಗತಿಯಲ್ಲಿದ್ದು, ಈ ಪೈಕಿ ಗಾಂಧಿ ವೃತ್ತದವರೆಗಿನ ವಿಸ್ತರಣೆ ಕಾಮಗಾರಿಯನ್ನು ಬೇಗ ಆರಂಭಿಸಬೇಕು  ಎಂಬುದಾಗಿ ನಗರಸಭೆ ಮಾಜಿ ಅಧ್ಯಕ್ಷರಾದ ಅಜಯ್ ಕುಮಾರ್ ಅವರು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ರಸ್ತೆ ವಿಸ್ತರಣೆ ಕುರಿತು ಚರ್ಚಿಸಲು ನಾಗರೀಕ ಹಿತರಕ್ಷಣಾ ಸಮಿತಿ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಸಾಕಷ್ಟು ವಿರೋಧದ ನಡುವೆಯೂ ರಸ್ತೆ ವಿಸ್ತರಣೆಗೆ ಮುಂದಾಗಿದ್ದೆ. ಕೆಲವರು ನಕಲಿ ದಾಖಲಾತಿ ಇಟ್ಟುಕೊಂಡು ನಗರಸಭೆ ಆಡಳಿತವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು. ಎಂದರಲ್ಲದೆ,

ಕಾನೂನಾತ್ಮಕವಾಗಿ  ಸಮಸ್ಯೆ ಬಗೆಹರಿಸಿಕೊಳ್ಳುವಂತೆ ನ್ಯಾಯಾಲಯ ತೀರ್ಪು ನೀಡಿತ್ತು. ಆಗ 12 ಕಟ್ಟಡ ಒಡೆಯಲು  ಆದೇಶ ಹೊರಡಿಸಿದ್ದೆವು.  ಆದರೆ ಕಟ್ಟಡಗಳ ಮಾಲಿಕರು ಪರಿಹಾರ ಕೋರಿ ಕೋರ್ಟ್ ಮೊರೆ ಹೋದರು ಎಂಬುದಾಗಿ ಅವರು ಹೇಳಿದರು.

ಸೆಪ್ಟಂಬರ್ 18ರಂದು ನೀಡಿರುವ ಆದೇಶದಲ್ಲಿ ಕಟ್ಟಡಗಳು ನಗರಸಭೆ ಆಸ್ತಿ ಎಂದು ಕೋರ್ಟ್ ತೀರ್ಪು ಕೊಟ್ಟಿದೆ. ಪರಿಹಾರಬೇಕು ಎಂದಾದರೆ 3 ವಾರದೊಳಗೆ ವಿಭಾಗೀಯ ಆಯುಕ್ತರಿಗೆ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿತ್ತು.

ಆದರೆ, ಕಟ್ಟಡಗಳ ಮಾಲಿಕರು ನಗರಾಭಿವೃದ‍್ದಿ  ಇಲಾಖೆ ಆಯುಕ್ತ ಬಳಿ ಹೋಗಿದ್ದಾರೆ. ಅವರಿಗೆ ಅಧಿಕಾರ ಇಲ್ಲದಿದ್ದರೂ ಕಟ್ಟಡ ಒಡೆಯುವುದಕ್ಕೆ ತಡೆ ನೀಡಿದ್ದಾರೆ. 100ಅಡಿ ವಿಸ್ತರಣೆ ಮಾಡಲಿದ್ದಾರೆ ಎಂಬ ಮಾಹಿತಿ ಇದ್ದು, ಇದರಿಂದ ಪರಿಹಾರ ಆಗದು  ಎಂಬುದಾಗಿ ಅವರು ಅಸಮಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿ ರಮೇಶ್ ಅವರು ಮಾತನಾಡಿ ನ್ಯಾಯಾಲಯದ ತೀರ್ಪಿನಂತೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು. ಕಟ್ಟಡಗಳ ಮಾಲಿಕರಿಗೆ ಪರಿಹಾರ ನೀಡುವುದಾದರೆ  ನಮ್ಮಅಭ್ಯಂತರವಿಲ್ಲ. ಸಾರ್ವಜನಿಕರು ಸಹನೆ ಕಳೆದುಕೊಳ್ಳುವ ಮೊದಲು ಕಾಮಗಾರಿ ಆರಂಭಿಸಿ  ಎಂಬುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಕೆ.ಸಿ.ಹೊರಕೇರಪ್ಪ,  ಮುಖಂಡರಾದ ಹೆಚ್.ಆರ್.ತಿಮ್ಮಯ್ಯ,ರಮೇಶ್, ಘಾಟ್ ರವಿ, ಕೆ.ಪಿ. ಶ್ರೀನಿವಾಸ್, ಕೆ.ಟಿ.ತಿಪ್ಪೇಸ್ವಾಮಿ ಅವರುಗಳು ಮಾತನಾಡಿದರು.

ಈ ಸಭೆಯಲ್ಲಿ ವಕೀಲರಾದ ಬಬ್ಬೂರುಸುರೇಶ್, ಪ್ರಶಾಂತ್ ಬಾಬು, ಆಲೂರುಸಿದ್ಧರಾಮಣ್ಣ, ಘಾಟ್ ಚಂದ್ರಪ್ಪ, ಬಾಲೇನಹಳ್ಳಿನಾಗರಾಜ್, ದಾದಾಪೀರ್, ಮುಬಾರಕ್, ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *