March 5, 2026
00002

ಹಿರಿಯೂರು:

ಕಾಡುಗೊಲ್ಲರ ಆರಾಧ್ಯ ದೈವವಾದ  ತಾಲ್ಲೂಕಿನ ವೆಣಕಲ್ಲುಗುಡ್ಡ ಗ್ರಾಮದ  ಶ್ರೀ ಯತ್ತಪ್ಪ ದೇವರ  ಜಾತ್ರಾ ಮಹೋತ್ಸವವು  ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಸಡಗರ-ಸಂಭ್ರಮ ಹಾಗೂ  ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆನಾಗಣ್ಣ, ನಾಗಮ್ಮದೇವರು ಮತ್ತು ಚಿತ್ರಲಿಂಗಸ್ವಾಮಿಯ ಆನೆಅಂಬಾರಿ, ಕದರಿನರಸಿಂಹಸ್ವಾಮಿಯ ಸಿಂಹಾನೋತ್ಸವ ಹಾಗೂ ಗರುಡ ಮಹೋತ್ಸವದೊಂದಿಗೆ ಟಿ.ಗೊಲ್ಲಹಳ್ಳಿ ಬಳಿ ಇರುವ ಶ್ರೀವೀರನಾಗಮ್ಮನಗುಡ್ಡೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ರಾತ್ರಿ ಹಿಟ್ಟಕ್ಕಿ ಏರುವುದು, ನಂತರ ಮುಂಡೆ, ಮಂಡೆ ಕಾರ್ಯಕ್ರಮ ನಡೆಯಿತು. ಬಳಿಕ ರಾತ್ರಿ ಗ್ರಾಮದಲ್ಲಿ ದೇವರ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಪ್ರತಿ ವರ್ಷದಂತೆ ಯತ್ತಪ್ಪನ ಜಾತ್ರೆಯಲ್ಲಿ  ಗ್ರಾಮದ ಅಣ್ಣ-ತಮ್ಮಂದಿರು, ತವರುಮನೆಯ ಹೆಣ್ಣುಮಕ್ಕಳಿಗೆ  ಬಳೆ ತೊಡಿಸುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದ್ದು, ಇದು ಜಾತ್ರೆಯ ವಿಶೇಷತೆಯಾಗಿದೆ.

ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಸಾವಿರಾರು  ಭಕ್ತರಿಗೆ  ಕಳೆದ 10 ವರ್ಷಗಳಿಂದ ತಾಲ್ಲೂಕು ಬಿ.ಜೆ.ಪಿ.ಅಧ್ಯಕ್ಷರಾದ ಅಭಿನಂದನ್ ಅವರು ಪ್ರಸಾದ ವಿತರಣೆ ಮಾಡುತ್ತಿದ್ದಾರೆ. ಅದರಂತೆ ಈ ವರ್ಷವೂ ಪ್ರಸಾದ ವಿತರಿಸಿದರು.

ಈ ಸಂದರ್ಭದಲ್ಲಿ ಪೂಜಾರಿನರಸಿಂಹಮೂರ್ತಿ, ಗುಡಿಗೌಡಮುದ್ದಜ್ಜ, ಗ್ರಾಮಪಂಚಾಯಿತಿ ಅಧ್ಯಕ್ಷೆ  ಶ್ರೀಮತಿ ಶಾರದಾಚಂದ್ರಣ್ಣ, ಉಪಾಧ್ಯಕ್ಷ ಪಾತಲಿಂಗಪ್ಪ, ಸದಸ್ಯರುಗಳಾದ ಶಿವಮೂರ್ತಿ, ಮಂಜುನಾಥ್, ರಂಗನಾಥ್, ಮುಖಂಡರಾದ ವಕೀಲಮಹಾಲಿಂಗಪ್ಪ, ಸಿ.ಮಹೇಶ್, ಕಾಂತಪ್ಪ, ಬಸವರಾಜ್, ಕದುರಣ್ಣ, ಮಹಾಲಿಂಗಪ್ಪ, ಓಂಕಾರಪ್ಪ, ಕೃಷ್ಣಪ್ಪ, ದಾಸಣ್ಣ, ನರಸಿಂಹಪ್ಪ, ತಿಪ್ಪಣ್ಣ, ಶಿವಣ್ಣ,   ಸಿಮ್ಮಾದ್ರಿ, ನಾಗರಾಜ್, ದೇವರಾಜ್, ರಾಕೇಶ್, ಮುರುಳಿಧರ, ವೀರಭದ್ರಪ್ಪ, ಮೂರ್ತಪ್ಪ,  ಬಾಳಜ್ಜ, ಕದಿರೇಗೌಡ, ಚಿಕ್ಕನಾಗಜ್ಜ ಹಾಗೂ ಜುಲ್ ನಾಗಣ್ಣ ವಂಶಸ್ಥರು ಸೇರಿದಂತೆ ವೇಣುಕಲ್ಲುಗುಡ್ಡದ ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *