
ಮೈಸೂರು:
ಮೈಸೂರಿನ ವನ್ಯಜೀವಿ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ಅವರ ಎರಡು ವನ್ಯಜೀವಿ ಛಾಯಾಚಿತ್ರಗಳು ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ವಿಶ್ವಕಪ್ ಚಾಯಾಗ್ರಾಹಣ ಸ್ಪರ್ಧೆ ಆಯ್ಕೆಯಾಗಿವೆ. ಶ್ರೀಯುತ ಎಸ್.ತಿಪ್ಪೇಸ್ವಾಮಿ ಅವರು ಹಿರಿಯೂರು ತಾಲ್ಲೂಕು ಆಲೂರು ಗ್ರಾಮದ ಕೃಷಿಕ ಕುಟುಂಬದ ಎಸ್. ಸಿದ್ದಣ್ಣನವರ ಮಗನಾಗಿದ್ದು, ಅಪ್ಪಟ ಗ್ರಾಮೀಣ ಪ್ರತಿಭೆಯಾಗಿದ್ದಾರೆ.
ಈ ಸ್ಪರ್ಧೆಯನ್ನು ಫೆಡರೇಷನ್ ಆಫ್ ಇಂಟರ್ ನ್ಯಾಷನಲ್ ಫೋಟೋಗ್ರಫಿ ಆರ್ಟ್ ನಡೆಸುತ್ತಿದ್ದು, ಈ ಸ್ಪರ್ಧೆಯ ಮಾನ್ಯತೆಯನ್ನು ಯುನೆಸ್ಕೋ ಸಂಸ್ಥೆಯು ನೀಡಿದ್ದು, ಭಾರತ ದೇಶದ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿಯು ಭಾರತದ 10ಜನ ವನ್ಯಜೀವಿ ಛಾಯಾಗ್ರಾಹಕರ 10ಪ್ರಿಂಟ್ ಗಳಷ್ಟು ಮತ್ತು 20ಡಿಜಿಟಲ್ ಚಿತ್ರಗಳನ್ನು ಆಯ್ಕೆ ಮಾಡಿ ಈ ಸ್ಪರ್ಧೆಗೆ ಕಳುಹಿಸಿಕೊಡಲಾಗುತ್ತದೆ.

ಪ್ರಪಂಚದ ನಾನಾ ದೇಶದ ವನ್ಯಜೀವಿ ಸಂಘ-ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಅತ್ಯುನ್ನತ ಚಿತ್ರಗಳ ತಂಡಕ್ಕೆ ವಿಶ್ವಕಪ್ ನೀಡಲಾಗುತ್ತದೆ. ನಮ್ಮ ದೇಶ ಈಗಾಗಲೇ 5 ಬಾರಿ ವಿಶ್ವಕಪ್ ಗೆದ್ದುಕೊಂಡಿದೆ.
ನನ್ನ ವನ್ಯಜೀವಿ ಛಾಯಾಚಿತ್ರಗಳು ಈವರೆಗೂ 15 ಬಾರಿ ಆಯ್ಕೆಗೊಂಡಿದೆ.ಈಗ ಆಯ್ಕೆಯಾದ ಚಿತ್ರಗಳು ಪ್ರಿಂಟ್ ವಿಭಾಗದಲ್ಲಿ ರಿವರ್ ಟರ್ಸ್ ಫೀಡಿಂಗ್ಚೆಕ್ ಮತ್ತು ಲೆಪರ್ಡ್ ವಿತ್ ಕಿಲ್ ಡಿಜಿಟಲ್ ವಿಭಾಗಕ್ಕೆ ಆಯ್ಕೆಯಾಗಿವೆ ಎಂಬುದಾಗಿ ಎಸ್.ತಿಪ್ಪೇಸ್ವಾಮಿ ಅವರು ಹೇಳಿದ್ದಾರೆ.
