March 3, 2026
00001

ಹಿರಿಯೂರು:

ಸಾರ್ವಜನಿಕರಿಗೆ ನೀಡುವ ಆಹಾರದಲ್ಲಿ  ಉತ್ತಮ ಗುಣಮಟ್ಟ ಇರಬೇಕು ಹಾಗೂ ಪ್ಲಾಸ್ಟಿಕ್ ಬಳಕೆ ಮಾಡಬಾರದು  ಮಾಡಿದ್ದು ಕಂಡುಬಂದಲಲಿ ದಂಡ ವಿಧಿಸಲಾಗುವುದು ಹಾಗೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಹೋಟೆಲ್ ಮಾಲಿಕರು  ಮತ್ತು ಇಂದಿರಾ ಕ್ಯಾಂಟೀನ್ ಗೆ ನಗರಸಭಾ ಪೌರಾಯುಕ್ತರಾದ ಎ.ವಾಸೀಂ ಅವರು  ಭೇಟಿ ನೀಡಿ ಎಚ್ಚರಿಸಿದರು.

ನಗರದ ಎಲ್ಲಾ ಹೋಟೆಲ್ ಗಳು  ಪ್ಲಾಸ್ಟಿಕ್ ಗಳನ್ನು ಬಳಸಬಾರದು. ಬಳಸಿದ್ದು ಕಂಡು ಬಂದಲ್ಲಿ ಕ್ರಮವಹಿಸಲಾಗುವುದು.ಸಾರ್ವಜನಿಕರಿಗೆ ಕೊಡುವ ಆಹಾರದ ಗುಣಮಟ್ಟತೆ ಹಾಗೂ ಹೋಟೆಲ್ ಸ್ವಚ್ಚತೆಯಿಂದ ಕೂಡಿರಬೇಕು. ಸಾಕಷ್ಟು ಹೋಟೆಲ್ ಗಳಲ್ಲಿ ಸ್ವಚ್ಚತೆ ಇಲ್ಲದಿರುವುದು ಗಮನಕ್ಕೆ ಬಂದಿದೆ.  ಎಂದರಲ್ಲದೆ,   ಸ್ವಚ್ಚತೆಯನ್ನು ಕಾಪಾಡುವುದರ ಜೊತೆಗೆ ಗುಣಮಟ್ಟದ ನೀರನ್ನು ನೀಡಬೇಕು. ನೀರಿನ ಟ್ಯಾಂಕು ಗಳನ್ನು  ಆಗಾಗ ಸ್ವಚ್ಚಗೊಳಿಸಿ ನೀರನ್ನು ಬಳಸಿ ಎಂಬುದಾಗಿ ಅವರು ಹೋಟೆಲ್ ಮಾಲಿಕರುಗಳಿಗೆ  ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪೌರಾಯುಕ್ತರಾದ ಎ.ವಾಸೀಂ, ಆರೋಗ್ಯ ನಿರೀಕ್ಷಕರಾದ ಹೆಚ್.ಟಿ.ಸುನೀಲ್ ಕುಮಾರ್, ಅಶೋಕ್ ಕುಮಾರ್, ನಯಾಜ್, ಶರೀಫ್  ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *