
ಹಿರಿಯೂರು
ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸಾಮಾಜಿಕವಾಗಿ, ಅಥಿ೯ಕವಾಗಿ ಅಭಿವೃದ್ಧಿ ಹೊಂದಲು ಸಂಜೀವಿನಿ ಒಕ್ಕೂಟಗಳು ಗಟ್ಟಿಗೊಳ್ಳಬೇಕಾಗಿದೆ ಎಂಬುದಾಗಿ ಎನ್.ಆರ್.ಎಲ್.ಎಂ. ನ ಜಿಲ್ಲಾ ವ್ಯವಸ್ಥಾಪಕರಾದ ರಮೇಶ್ ನಾಯ್ಕ ಅವರು ಹೇಳಿದರು.
ತಾಲ್ಲೂಕಿನ ಮಸ್ಕಲ್ ಗ್ರಾಮದೇವತೆ ಕರಿಯಮ್ಮದೇವತೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾಷಿ೯ಕ ಕ್ರೀಯಾ ಯೋಜನೆಯ ತರಬೇತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ನಾಗವೇಣಿ ಮಾತನಾಡಿ, ಗ್ರಾಮ ಒಕ್ಕೂಟಗಳ ಬೇಡಿಕೆಗಳ ಆಧಾರಿತವಾಗಿ ದೂರದೃಷ್ಟಿ ಯೋಜನೆಗಳ ವಾಷಿ೯ಕ ಕ್ರೀಯಾ ಯೋಜನೆಯನ್ನು ಒಕ್ಕೂಟದ ಕಾಯ೯ಕಾರಿ ಸಮಿತಿ, ಸಿಬ್ಬಂದಿಗಳು, ಸ್ವ-ಸಹಾಯ ಸಂಘಗಳ ಮಹಿಳೆಯರು ಜೊತೆಗೂಡಿ ತಯಾರಿಸುತ್ತಾರೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಎನ್. ಆರ್. ಎಲ್. ಎಂ. ವಲಯ ಮೇಲ್ವಿಚಾರಕ ಲಕ್ಷ್ಮಣ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಆರ್ ನಾಗವೇಣಿ, ಒಕ್ಕೂಟದ ಅಧ್ಯಕ್ಷರು, ಕಾಯ೯ಕಾರಿ ಸಮಿತಿ ಸದಸ್ಯರು, ಒಕ್ಕೂಟದ ಸಿಬ್ಬಂದಿಗಳು ಮಹಿಳೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
