March 5, 2026
01

ಹಿರಿಯೂರು:

ನಗರ ವ್ಯಾಪ್ತಿಯ ಆಲೂರು ಕ್ರಾಸ್ ಬಳಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಬ್ಬ ಅಜ್ಞಾತ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವಿನ ಹೆಸರು ಮತ್ತು ವಿಳಾಸ ಈಗಲೂ ಪತ್ತೆಯಾಗಿಲ್ಲ, ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂಬುದಾಗಿ ಪೋಲೀಸ್ ಇಲಾಖೆಯಿಂದ ಮಾಹಿತಿ ತಿಳಿದುಬಂದಿದೆ.

ತಮಿಳುನಾಡು ಮೂಲದ ಲಾರಿಯನ್ನು ಹಿಮ್ಮೆಟ್ಟಿ ಹಿಡಿದ ಹಿರಿಯೂರು ಪೊಲೀಸ್ ಮತ್ತು ವಿಜಯ್ ಕುಮಾರ್ ಘಟನೆ ನಡೆದ ವೇಳೆಯಲ್ಲಿ ಸ್ಥಳದಲ್ಲಿದ್ದ ಪ್ರತ್ಯಕ್ಷ ದರ್ಶಿ ಕೂಡ್ಲಳ್ಳಿ ವಿಜಯ್ ಮತ್ತು ಹಿರಿಯೂರು ನಗರ ಪೊಲೀಸ್ ಪಿ ಎಸ್ ಐ ಲಕ್ಷ್ಮೀ ನಾರಾಯಣ್ ಮತ್ತು ತಂಡ ತಡಮಾಡದೆ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ, ಈ ಕುರಿತು ಹಿರಿಯೂರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಹಿರಿಯೂರು ನಗರ ಪೊಲೀಸ್ ಪಿ ಎಸ್ ಐ ಲಕ್ಷ್ಮೀ ನಾರಾಯಣ್ ಮತ್ತು ತಂಡದವರ ಮಾನವೀಯ ನಡೆ ಮತ್ತು ತಕ್ಷಣದ ಸಹಾಯ ನಿಜಕ್ಕೂ  ಶ್ಲಾಘನೀಯ ಕಾರ್ಯವಾಗಿದೆ. ಗಾಯಾಳುವಿನ ಗುರುತು ಪತ್ತೆ ಮಾಡಬೇಕೆಂದು ಸಾರ್ವಜನಿಕರಿಗೆ ಹಿರಿಯೂರು ನಗರ ಪೊಲೀಸ್ ಇಲಾಖೆ ವತಿಯಿಂದ ಮನವಿ ಮಾಡಿದ್ದಾರೆ.

ಈ ವ್ಯಕ್ತಿಯನ್ನು ಯಾರಾದರೂ ಗುರುತಿಸಬಹುದಾದರೆ, ಹಿರಿಯೂರು ನಗರ ಪೊಲೀಸ್ ಠಾಣೆ: 08193–263444, ಈ ಸಂಖ್ಯೆಗೆ ಸಂಪರ್ಕಿಸಲು ವಿನಂತಿಸಲಾಗಿದೆ, ಈ ಪ್ರದೇಶದಲ್ಲಿ ಪದೇಪದೇ ಅಪಘಾತಗಳು ನಡೆಯುತ್ತಿರುವುದರಿಂದ, ಈ ಬಗ್ಗೆ ಪವರ್ ಫೋಕಸ್ ಸಂಪಾದಕರಾದ ಅರ್ಜುನ್ ಬ್ಯಾಡರಹಳ್ಳಿ ರವರು ಕೇಂದ್ರ ರಸ್ತೆ ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಇಮೇಲ್ ಮುಖಾಂತರ ಮನವಿಯನ್ನು ಸಲ್ಲಿಸಿದ್ದಾರೆ.

About The Author

Leave a Reply

Your email address will not be published. Required fields are marked *