April 21, 2026
3

ಹಿರಿಯೂರು:

ನಟ  ಹಾಗೂ ನಿರ್ದೇಶಕರಾದ ಶಂಕರ್ ನಾಗ್ ಅವರು  ಈ ನಾಡು ಕಂಡ ಅದ್ಬುತ ಕಲಾವಿದ. ಅವರ ನೆನಪಿನಲ್ಲಿ  ಹಿರಿಯೂರಿನ ದಿವು ಶಂಕರ್ ಅವರು ಕಳೆದ 35 ವರ್ಷಗಳಿಂದ ನಿರಂತರವಾಗಿ ಯಾವುದೇ ಆಪೇಕ್ಷೆ ಇಲ್ಲದೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂಬುದಾಗಿ ಮಹಾಲಿಂಗಪ್ಪ ಅವರು ಹೇಳಿದರು.

ನಗರದಲ್ಲಿ ಶಂಕರ್ ನಾಗ್ ಅಭಿಮಾನಿಗಳ ಕಲಾ ವೇದಿಕೆ ಹಿರಿಯೂರು, ಅಮೃತ ಮಹಿಳಾ ಸ್ವಸಹಾಯ ಸಂಘ, ಗುರು ಶಂಕರ್ ನಾಗ್ ಡಿಜಿಟಲ್ ಫೋಟೋ ಸ್ಟುಡಿಯೋ ಮತ್ತು ಕರ್ನಾಟಕ ರಾಜ್ಯ ಗುರು ಶಂಕರ್ ನಾಗ್ ಮಿಮಿಕ್ರಿ ಹಾಸ್ಯ  ಸಾಹಿತ್ಯ ಗಾಯನ ಜಾನಪದ ವಿವಿಧ ಕಲಾವಿದರ ಸಾಂಸ್ಕೃತಿಕ ಕಲಾ ವೃಂದದ  ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಟ ದಿ|| ಶಂಕರ್ ನಾಗ್ ಅವರ 71ನೇ ವರ್ಷದ ಜನ್ಮದಿನಾಚರಣೆ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಬಲ ಬಾರಿಸುವ ಮೂಲಕ ಕಾರ್ಯಕ್ರಮ  ಉದ್ಘಾಟಿಸಿ ಅವರು  ಮಾತನಾಡಿದರು.

ಹಿರಿಯೂರಿನ ಜ್ಯೂನಿಯರ್  ಶಂಕರ್ ನಾಗ್ ಎಂದೇ ಖ್ಯಾತರಾದ  ದಿವು ಶಂಕರ್ ರವರು ಸಹ ಒಬ್ಬ ಕಲಾವಿದರಾಗಿದ್ದು, ಅವರು ಇನ್ನೂ  ಹೆಚ್ಚಿನ  ಕಲಾ ಸೇವೆ ಮಾಡಲು  ನಗರದ ನಾಗರೀಕರು ಸಹಕಾರ ನೀಡಬೇಕು. ಈ ಮೂಲಕ ಕಲಾ ರಂಗಕ್ಕೆ  ಹೆಚ್ಚು ಪ್ರೋತ್ಸಾಹ ನೀಡಬೇಕು  ಎಂಬುದಾಗಿ ಅವರು ಹೇಳಿದರು.

ಜ್ಯೂನಿಯರ್  ಶಂಕರ್ ನಾಗ್ ಖ್ಯಾತಿಯ ಹೆಚ್.ಸಿ.ದಿವುಶಂಕರ್ ಅವರು  ಮಾತನಾಡಿ  ಕಲಾವಿದರಿಗೆ ಹೆಚ್ಚಿನ ಅವಕಾಶಗಳ ಅಗತ್ಯವಿದೆ. ಶಂಕರ್ ನಾಗ್ ಸ್ಮರಣಾರ್ಥ ನೆಹರು ಮೈದಾನದಲ್ಲಿ ಕಲಾಮಂದಿರ ನಿರ್ಮಾಣ ಮಾಡಲು ಸರ್ಕಾರ ಹಾಗೂ ನಗರಸಭೆಯವರು ಸಹಕರಿಸಬೇಕು ಎಂದರಲ್ಲದೆ,

ಕಲಾಮಂದಿರ ನಿರ್ಮಾಣವಾದ ನಂತರ ಸಾರ್ವಜನಿಕರಿಗೆ ಉಚಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಲಾಗುವುದು ಎಂಬುದಾಗಿ ಅವರು ಹೇಳಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಡಿ.ಸಣ್ಣಪ್ಪ ಅವರು ಮಾತನಾಡಿ  ನೆಹರು ಮೈದಾನ ನಗರಸಭೆಯ ಸ್ವತ್ತು. ಅಕ್ರಮವಾಗಿ ಕಟ್ಟಿರುವ ಕಟ್ಟಡಗಳನ್ನು ವಶಕ್ಕೆ ಪಡೆಯುತ್ತೇವೆ.  ಶಂಕರ್ ನಾಗ್  ಕಲಾಮಂದಿರ ನಿರ್ಮಾಣಕ್ಕಾಗಿ ಸಹಕಾರ ನೀಡಲಾಗುವುದು ಎಂಬುದಾಗಿ ಅವರು  ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕನ್ನಡ ಸಾಹಿತ್ಯರತ್ನ, ಕನ್ನಡಕಲಾ ಸೇವಾರತ್ನ, ಕನ್ನಡ ಕಲಾರತ್ನ ಪ್ರಶಸ್ತಿ ವಿತರಣಾ ಸಮಾರಂಭ ನಡೆಸಲಾಯಿತು.

ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ಧ ನಿವೃತ್ತ ಶಿಕ್ಷಕರಾದ ಕೆ.ಆರ್.ಹಳ್ಳಿ ರಾಮಚಂದ್ರಪ್ಪ ವಹಿಸಿ ಕಲಾ ಮಂದಿರ ನಿರ್ಮಾಣಕ್ಕಾಗಿ 5ಸಾವಿರ ರೂ. ದೇಣಿಗೆ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕನ್ನಡ ಸಾಹಿತ್ಯ ರತ್ನ, ಕನ್ನಡ ಕಲಾ ಸೇವಾ ರತ್ನ, ಕನ್ನಡ ಕಲಾ ರತ್ನ ಪ್ರಶಸ್ತಿ ವಿತರಣಾ ಸಮಾರಂಭ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಗನ್ನಾಯಕನಹಳ್ಳಿ ಹೆಚ್.ಸಿದ್ಧೇಶ್, ಪರಶುರಾಮಗೊರಪ್ಪರ್, ಸಂತೋಷ್ ಕುಮಾರ್, ಶಿವಕುಮಾರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನುಮಂತಪ್ಪ, ರೈತ ಮುಖಂಡರಾದ ಜಯಣ್ಣ, ಹಾವೇರಿ ನಾಗರತ್ನಮ್ಮ, ಸರಸ್ವತಿ, ಲಕ್ಮಿ, ಧನಲಕ್ಷ್ಮಿ, ಪ್ರಿಯಾಂಕಾ, ಮೋಹನ್, ಗಂಗಾವತಿಯ ಜ್ಯೂನಿಯರ್ ರಾಜಕುಮಾರ್, ಕೆ.ಆರ್.ಪೇಟೆಯ ರಂಗಭೂಮಿ ಕಲಾವಿದರು, ವಸಂತ ನಗರದ ಭಜನಾ ತಂಡದವರು ಮತ್ತು ಶಂಕರ್ ನಾಗ್ ಅಭಿಮಾನಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *