March 3, 2026
1

ಹಿರಿಯೂರು :

ದೀಪಾವಳಿ ಹಬ್ಬವು ಬದುಕಿನ ಕತ್ತಲೆಯನ್ನು ದೂರಮಾಡಿ ಬೆಳಕಿನೆಡೆಗೆ ನಮ್ಮ ಕರೆದೊಯ್ಯುವ ಬೆಳಕಿನ ಹಬ್ಬವಾಗಿದ್ದು, ಈ ಹಬ್ಬವು ಕೆಟ್ಟದರ ಮೇಲೆ ಒಳ್ಳೆಯದರ ಮತ್ತು ಅಜ್ಞಾನದ ಮೇಲೆ ಜ್ಞಾನದ ಗೆಲುವನ್ನು ಸೂಚಿಸುವ ಸಂಕೇತವಾಗಿದೆ, ಈ ಹಬ್ಬವನ್ನು ನಾವುನೀವೆಲ್ಲರೂ ದೀಪಬೆಳಗಿಸುವ ಮೂಲಕ ಆಚರಿಸೋಣ ಎಂಬುದಾಗಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರುಹನುಮಂತರಾಯಪ್ಪ ಹೇಳಿದರು.

ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದೀಪಾವಳಿ ಸಂಭ್ರಮಾಚರಣೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆಯುವುದರಿಂದ ಸುತ್ತಲ ಪರಿಸರಕ್ಕೆ ಹಾನಿಯಾಗಿ ನಾವು ಸಿಡಿಸುವ ಪಟಾಕಿ ಮದ್ದುಗಳು ಪರಿಸರವನ್ನು ಹಾಳು ಮಾಡುವುದರ ಜೊತೆಗೆ ಎಷ್ಟೋ ಬಾರಿ ಹಚ್ಚುವವರ ಕಣ್ಣುಗಳಿಗೆ ಈ ಪಟಾಕಿಗಳು ಸಿಡಿದು, ಕಣ್ಣುಗಳೇ ಹೋಗಿರುವ ಘಟನೆ ನಡೆದಿದೆ, ಆದ್ದರಿಂದ ಪಟಾಕಿಯಂತಹ ಹಾನಿಕಾರಕ ವಸ್ತುಗಳಿಂದ ದೂರವಿದ್ದು, ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂಬುದಾಗಿ ಕರೆ ನೀಡಿದರು.  

ಉಪನ್ಯಾಸಕಿ ಶ್ರೀಮತಿ ಗಂಗಮ್ಮ ಮಾತನಾಡಿ, ದುಷ್ಟ ರಾಕ್ಷಸ ನರಕಾಸುರನನ್ನು ಸಂಸಾರ ಮಾಡಿ, ದೈವಶಕ್ತಿಯ ಮಹಿಮೆಯನ್ನು ಸಾರುವ ದೀಪಾವಳಿ ಹಬ್ಬವನ್ನು ನಮ್ಮ ಮನೆಯ ಹಾಗೂ ಮನದ ಅಂಧಕಾರವನ್ನು ದೂರಮಾಡಿ ಬೆಳಕಿನತ್ತ ಕೊಂಡೊಯ್ಯಲಿ ಎಂಬ ಉದ್ದೇಶದಿಂದ ಮನೆಯ ಸುತ್ತಲೂ ದೀಪಗಳನ್ನು ಹಚ್ಚಿ ಬೆಳಗಿಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸುತ್ತೇವೆ ಎಂಬುದಾಗಿ ಹೇಳಿದರು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಉಮೇಶ್ ಯಾದವ್ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ನಮ್ಮ ಭಾರತೀಯ ಭವ್ಯ ಸಂಸ್ಕೃತಿ ಹಾಗೂ ಪರಂಪರೆ ಸಂಪ್ರದಾಯವನ್ನು ಪ್ರತಿಬಿಂಬಿಸುವ ಹಬ್ಬಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ನಮ್ಮ ಶಾಲೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಶಿಕ್ಷಕ ಉಮೇಶ್ ಯಾದವ್, ಶಿವರಾಜ್ ನಾಯಕ್, ಕೋ-ಆರ್ಡಿನೇಟರ್ ಗಳಾದ ಶ್ರೀಮತಿ ನಂದಿನಿ, ಶ್ರೀಮತಿ ರಚನ, ಶಿಕ್ಷಕಿಯರುಗಳಾದ ರಜಿಯಾ, ಗಂಗಮ್ಮ, ರಂಜಿತಾ, ಸಬೀಹಾ, ಮುಬೀನಾ, ಹೇಮಲತಾ, ದ್ರಾಕ್ಷಾಯಣಿ, ಸಾಧಿಕಾ, ಮಮತಾ, ಭಾಗ್ಯ, ಪೂಜಾ, ಕಾವ್ಯ, ಜಯಸುಧಾ, ಅಕ್ಷಿತಾ, ಸುಲೋಚನಾ, ಸೇರಿದಂತೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *