

ಹಿರಿಯೂರು :
ತಾಲ್ಲೂಕಿನ ಶ್ರೀಶುಭೋದಯ ಶೈಕ್ಷಣಿಕ ಸೇವಾ ಆಶ್ರಮದ ಹಿತೈಷಿಗಳೂ ದಾನಿಗಳು ಆದ ಶ್ರೀ ನವಾಜ್ ರವರು ತಮ್ಮ ಮಗಳ ಹುಟ್ಟುಹಬ್ಬದ ಪ್ರಯುಕ್ತ ಆಶ್ರಮದ ಎಲ್ಲಾ ಹಿರಿಯರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದು, ಇವರ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ ಎಂಬುದಾಗಿ ಶ್ರೀಶುಭೋದಯ ವೃದ್ಧಾಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಹೇಳಿದರು.

ತಾಲ್ಲೂಕಿನ ಶ್ರೀಶುಭೋದಯ ಶೈಕ್ಷಣಿಕ ಸೇವಾ ಆಶ್ರಮದಲ್ಲಿ ತಮ್ಮ ಮಗಳ ಹುಟ್ಟುಹಬ್ಬದ ಪ್ರಯುಕ್ತ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ ಶ್ರೀ ನವಾಜ್ ರವರನ್ನು ಅಭಿನಂದಿಸಿ, ನಂತರ ಅವರು ಮಾತನಾಡಿದರು.
ಆಶ್ರಮದ ಕಟ್ಟಡದಲ್ಲಿ ಹೆಚ್ಚಿನ ಕೋಣೆಗಳ ನಿರ್ಮಾಣ ಕಾರ್ಯ ಆರಂಭಿಸಿದ್ದು, ಈ ಕಾರ್ಯಕ್ಕೆ ಸುಮಾರು 30 ಚೀಲ ಸಿಮೆಂಟ್ ಅನ್ನು ಸಹ ವ್ಯವಸ್ಥೆ ಮಾಡಿರುತ್ತಾರೆ ಶ್ರೀಯುತರ ಸೇವಾಮನೋಭಾವಕ್ಕೆ ಆಶ್ರಮ ಸಮಿತಿ ವತಿಯಿಂದ ಅವರಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ದೈವಾನುಗ್ರಹ ಪ್ರಾಪ್ತಿಯಾಗಲೆಂದು ಹಾರೈಸುತ್ತೇವೆ ಎಂಬುದಾಗಿ ಶುಭಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀಯುತ ನವಾಜ್ ರವರು ಹಾಗೂ ಅವರ ಕುಟುಂಬಸ್ಥರು ಮತ್ತು ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿದರು.