March 6, 2026
00001

ಹಿರಿಯೂರು:

ತಾಲ್ಲೂಕಿನ ಭೀಮನಬಂಡೆಯ ಶ್ರೀ ಶುಭೋದಯ ಸೇವಾವೃದ್ಧಾಶ್ರಮಕ್ಕೆ 36 ಜನ ಹಿರಿಯರು, ಅನಾಥರು, ನಿರಾಶ್ರಿತರು, ಹೆಚ್ಚಾಗಿ ಬರುತ್ತಿರುವ ಕಾರಣ ಹೆಚ್ಚು  ಕೊಠಡಿಗಳ ಅವಶ್ಯಕತೆ ಇದ್ದು, ಕೊಠಡಿಗಳ ನಿರ್ಮಾಣಕ್ಕೆ ದಾನಿಗಳು ಸಹಕರಿಸಬೇಕು ಎಂಬುದಾಗಿ ಶ್ರೀಶುಭೋದಯ ಸೇವಾವೃದ್ಧಾಶ್ರಮದ ಮುಖ್ಯಸ್ಥರಾದ ತೇಜೋಮೂರ್ತಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಶ್ರೀಶುಭೋದಯ ಸೇವಾವೃದ್ಧಾಶ್ರಮದ ಹಿಂಭಾಗದಲ್ಲಿ ಮತ್ತಷ್ಟು ಕೊಠಡಿಗಳ  ವ್ಯವಸ್ಥೆ ಮಾಡಿಸುತ್ತಿದ್ದೇವೆ. ಸಿಮೆಂಟ್ ಇಟ್ಟಿಗೆಯಲ್ಲಿ ಗೋಡೆ ಕಟ್ಟಲಾಗಿದೆ. ಇದೀಗ ಸಿಮೆಂಟ್ ಸೀಟುಗಳು ಹಾಗೂ ಕಬ್ಬಿಣದ ಪೈಪ್ ಗಳ ಅವಶ್ಯಕತೆ ಇದ್ದು, ದಾನಿಗಳು ಈ ಪುಣ್ಯ ಕಾರ್ಯಕ್ಕೆ ಸಹಕಾರ ನೀಡಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

ಅಲ್ಲದೆ, ಕೊಠಡಿಗಳ ನಿರ್ಮಾಣಕ್ಕೆ ಅಗತ್ಯವಿರುವ ಸಿಮೆಂಟ್ ಸೀಟುಗಳು ಹಾಗೂ ಕಬ್ಬಿಣದ ಪೈಪ್ ಗಳನ್ನು ಕೊಡುಗೆಯಾಗಿ ನೀಡುವಂತಹ ದಾನಿಗಳ ಹೆಸರನ್ನು ಕೊಠಡಿಗಳ ಮುಂಭಾಗದಲ್ಲಿನ ಕಲ್ಲಿನ ಮೇಲೆ ಬರೆಸಲಾಗುವುದು ಎಂಬುದಾಗಿ ಅವರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *