March 2, 2026
000006

ಹಿರಿಯೂರು :

ತಾಲ್ಲೂಕನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡುವ ಉದ್ದೇಶದಿಂದ ನಗರದ ಸ್ವಚ್ಛತೆ ಹಾಗೂ ಸೌಂದರ್ಯ ಕಾಪಾಡಲು ನಗರಸಭೆ ಆವರಣದಲ್ಲಿ ಸುಂದರ ಉದ್ಯಾನವನ, ನೀರಿನ ಕಾರಂಜಿ, ತಾವರೆಕೊಳ ನಿರ್ಮಿಸಲಾಗುತ್ತದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರಸಭೆ ಕಚೇರಿ ಆವರಣದಲ್ಲಿ ನಗರಸಭೆಯ ಆವರ್ತಕ ನಿಧಿಯಡಿಯಲ್ಲಿ ಸುಮಾರು 76.50 ಲಕ್ಷ ರೂ ವೆಚ್ಚದಲ್ಲಿ ಸುಂದರ ಉದ್ಯಾನವನ, ನೀರಿನ ಕಾರಂಜಿ ಮತ್ತು ವಾಹನಗಳ ನಿಲುಗಡೆ ತಾಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ವಾಸೀಂ, ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಂ.ಡಿ.ಸಣ್ಣಪ್ಪ, ವಿಠ್ಠಲ್ ಪಾಂಡುರಂಗ, ಮಮತಾ, ನಗರಸಭೆ ಸದಸ್ಯರುಗಳಾದ ಶ್ರೀಮತಿ ರತ್ನಮ್ಮ, ಶ್ರೀಮತಿ ವಿಶಾಲಾಕ್ಷಮ್ಮ, ಬಿ.ಎನ್.ಪ್ರಕಾಶ್, ಜ್ಞಾನೇಶ್, ನಾಮ ನಿರ್ದೇಶನ ಸದಸ್ಯರುಗಳಾದ ಶಿವಕುಮಾರ್, ಅಜೀಂಪಾಷಾ, ಸೇರಿದಂತೆ, ನಗರಸಭೆ ಎಂಜಿನಿಯರ್ ಗಳಾದ ರಾಜು, ಶ್ರೀರಂಗ, ಹರ್ಷ, ಪ್ರಸನ್ನ, ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಸಂದ್ಯಾ, ಸುನೀಲ್,ನಯಾಜ್, ಹಾಗೂ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹನುಮಂತರಾಜು, ಪೌರಕಾರ್ಮಿಕ ಧಫೇದಾರ್ ಗಳಾದ ರಂಗಸ್ವಾಮಿ, ವೀರಕ್ಯಾತಪ್ಪ, ದುರ್ಗಪ್ಪ, ದೇವರಾಜ್  ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *