March 2, 2026
02

ಹಿರಿಯೂರು:

ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯವು, ರಾಮನ ಪಿತೃವಾಕ್ಯ ಪರಿಪಾಲನೆ, ಸಹೋದರರ ಭ್ರಾತೃತ್ವ, ತಂದೆ-ಮಕ್ಕಳ ಉತ್ತಮ ಬಾಂಧವ್ಯದ ಮಹತ್ವವನ್ನು ತಿಳಿಸುತ್ತದೆ, ಇಂತಹ ರಾಮಾಯಣ ಮಹಾಕಾವ್ಯವನ್ನು ಓದುವ ಮೂಲಕ ಇಂದಿನ ಯುವಜನತೆ ಕುಟುಂಬದ ಪ್ರಾಮುಖ್ಯತೆ ಹಾಗೂ ತಂದೆ-ತಾಯಿಗಳು ಹಾಗೂ ಒಡಹುಟ್ಟಿದವರ ಮಹತ್ವವನ್ನು ತಿಳಿಯಬೇಕಿದೆ ಎಂಬುದಾಗಿ ನಗರಸಭೆ ಅಧ್ಯಕ್ಷರಾದ ಆರ್.ಬಾಲಕೃಷ್ಣ ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಬುಧವಾರದಂದು ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಅವರು ಮಾತನಾಡಿದರು.

ಪೌರಾಯುಕ್ತ ಎ.ವಾಸೀಂ ಮಾತನಾಡಿ,ಮಹರ್ಷಿ ವಾಲ್ಮೀಕಿ ವಿಶ್ವದ ಶ್ರೇಷ್ಠ ದಾರ್ಶನಿಕರ ಸಾಲಿನಲ್ಲಿ ನಿಲ್ಲುವ ವ್ಯಕ್ತಿಯಾಗಿದ್ದು, ರಾಮಾಯಣ ಕೃತಿಯ ಮೂಲಕ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪ್ರಚುರಪಡಿಸಿದ ಶ್ರೇಷ್ಠ ಚಿಂತಕರಾಗಿದ್ದು, ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವಕವಿಯಾಗಿ, ಇತಿಹಾಸಕಾರರಾಗಿ, ದಾರ್ಶನಿಕರಾಗಿ, ಶಾಸ್ತ್ರಜ್ಞರಾಗಿ ಮತ್ತು ತತ್ವಜ್ಞಾನಿಯಾಗಿ ಸರ್ವಕಾಲಕ್ಕೂ ಗೌರವಿಸಲ್ಪಡುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಆರ್. ಬಾಲಕೃಷ್ಣ, ಪೌರಾಯುಕ್ತರಾದ ಎ.ವಾಸೀಂ, ನಗರಸಭೆ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಂ. ಡಿ ಸಣ್ಣಪ್ಪ ರತ್ನಮ್ಮ, ಮಮತಾ,           ಬಿ ಎನ್. ಪ್ರಕಾಶ್, ಅನಿಲ್, ವಿಶಾಲಾಕ್ಷಿ, ಅಜೀಂ ಪಾಷಾ, ಶಿವಕುಮಾರ್ ಆರೋಗ್ಯ ನಿರೀಕ್ಷಕರಾದ ಸುನೀಲ್ ಕುಮಾರ್, ಮಹಾಲಿಂಗರಾಜ್, ಸಂಧ್ಯಾ, ಅಶೋಕ್, ನಯಜ್, ಷರೀಫ್ ಸೇರಿದಂತೆ ಸಿಬ್ಬಂದಿಗಳಿದ್ದರು.

About The Author

Leave a Reply

Your email address will not be published. Required fields are marked *