
ಹಿರಿಯೂರು :
ಈ ದೇಶ ಕಂಡಂತಹ ಮಹಾನ್ ನಾಯಕರುಗಳಾದ ಮಹಾತ್ಮ ಗಾಂಧೀಜಿಯವರು ಸತ್ಯ ಹಾಗೂ ಅಹಿಂಸೆಗೆ ಹೆಸರಾಗಿದ್ದು, ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಪ್ರಾಮಾಣಿಕತೆ, ಸರಳಜೀವನ, ಕರ್ವನಿಷ್ಠೆಗೆ ಹೆಸರಾಗಿದ್ದಾರೆ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರುಹನುಮಂತರಾಯಪ್ಪ ಅವರು ಹೇಳಿದರು.
ನಗರದ ವಾಣಿವಿಲಾಸವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಾನ್ ನಾಯಕರುಗಳ ಜಯಂತಿಗಳು ಕೇವಲ ಒಂದು ದಿನದ ಆಚರಣೆಯಾಗದೇ ಬಳಕೆಯಾಗದೇ ಪ್ರತಿದಿನವೂ ಈ ದೇಶಕ್ಕಾಗಿ ದುಡಿದ ಮಹಾನ್ ನಾಯಕರುಗಳ ತತ್ವ ಆದರ್ಶಗಳನ್ನು ನಮ್ಮ ಯುವಪೀಳಿಗೆಯಾದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರತಿದಿನವೂ ರೂಢಿಸಿಕೊಳ್ಳಬೇಕು ಆಗ ಮಾತ್ರ ಈ ಮಹಾತ್ಮರ ಜಯಂತಿ ಆಚರಣೆಗಳಿಗೆ ನಿಜವಾದ ಅರ್ಥ ಸಿಗುತ್ತದೆ ಎಂಬುದಾಗಿ ಅವರು ಹೇಳಿದರು.

ಉಪನ್ಯಾಸಕಿ ಶ್ರೀಮತಿ ಗಂಗಮ್ಮ ಅವರು ಮಾತನಾಡಿ, ರಾಷ್ಟ್ರಪಿತ ಮಹತ್ಮಾ ಗಾಂಧೀಜಿ ಹಾಗೂ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರೂ ಅಕ್ಟೋಬರ್ 2ರಂದು ಜನಿಸಿದ ಮಹಾನ್ ವ್ಯಕ್ತಿಗಳಾಗಿದ್ದು, ಗಾಂಧೀಜಿಯವರು ರೈತರನ್ನು “ಈ ದೇಶದ ಬೆನ್ನೆಲುಬು” ಎಂದರೆ, ಲಾಲ್ ಬಹದ್ದೂರ್ ಶಾಸ್ತ್ರಿಯವರು “ಜೈಜವಾನ್ ಜೈಕಿಸಾನ್ “ಎಂಬ ಘೋಷವಾಕ್ಯದೊಂದಿಗೆ ದೇಶವನ್ನು ಆಳಿದರು. ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಶಿಕ್ಷಕಿಯರುಗಳಾದ ಮುಬೀನಾ, ಸಬೀಹಾ, ರಂಜಿತಾ, ಸಾಧಿಕಾ, ಅಫ್ರೀನ್, ಮಮತಾ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಶ್ರೀಮತಿ ಜಯಸುಧಾ, ಪೂಜಾ, ಶ್ರೀಮತಿಸುಲೋಚನ, ಶಿಕ್ಷಕರಾದ ಉಮೇಶ್ ಯಾದವ್, ಶಿವರಾಜ್ ನಾಯಕ್, ಕಾಂತರಾಜ್, ಸುರೇಶ್, ಪ್ರಭಾಕರ್ ಸೇರಿದಂತೆ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
