

ಹಿರಿಯೂರು :
ಈ ರಸ್ತೆ ಕಾಮಗಾರಿಯು ಪೂರ್ಣಗೊಂಡು ನಾಗರೀಕರಿಗೆ ಸುಗಮ ಸಂಚಾರದ ಅನುಕೂಲವನ್ನು ಒದಗಿಸಲಿದೆ ಎಂಬ ನಂಬಿಕೆ ಇದ್ದು, ಸಾರ್ವಜನಿಕರ ಹಿತದದೃಷ್ಟಿಯಿಂದ ನಗರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರಸಭೆ ವ್ಯಾಪ್ತಿಯ ವಾರ್ಡ್ ನಂ.3 ರಲ್ಲಿ, ವೇದಾವತಿ ನಗರ ಚಂದ್ರ ಲೇಔಟ್ ಮುಖ್ಯ ರಸ್ತೆಯ ಅಡ್ಡ ರಸ್ತೆಯಿಂದ ರಾಜಮ್ಮ ರಂಗಸ್ವಾಮಿ ಮನೆಯಿಂದ ತಿಪ್ಪಮ್ಮ ಉಗ್ರಪ್ಪ ಮನೆವರೆಗೆ ಸುಮಾರು 10 ಲಕ್ಷ ರೂಗಳ ಸಿ.ಸಿ. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ, ಪೌರಾಯುಕ್ತರಾದ ಎ.ವಾಸೀಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್, ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಶಿವರಂಜಿನಿಯಾದವ್, ಕಾಂಗ್ರೆಸ್ ಮುಖಂಡರಾದ ಗಿಡ್ಡೋಬನಹಳ್ಳಿಅಶೋಕ್, ಕಲ್ಲಹಟ್ಟಿ ಹರೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.