
ಹಿರಿಯೂರು :
ನಮ್ಮ ಶ್ರೀಕನ್ಯಕಾ ಸೌಹಾರ್ದ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ನಮ್ಮ ಷೇರುದಾರರ ಹಾಗೂ ಗ್ರಾಹಕರ ಅತ್ಯುತ್ತಮ ಸಹಕಾರದಿಂದ ಸುಮಾರು 112 ಕೋಟಿ 87ಲಕ್ಷ 45ಸಾವಿರ ರೂಗಳ ವಹಿವಾಟು ನಡೆಸಿದ್ದು, ಸುಮಾರು 93 ಲಕ್ಷ 44 ಸಾವಿರ ರೂಗಳ ನಿವ್ವಳ ಲಾಭ ಗಳಿಸಿದೆ ಎಂಬುದಾಗಿ ಶ್ರೀಕನ್ಯಕಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಬಿ.ಎನ್.ತಿಪ್ಪೇಸ್ವಾಮಿ ಹೇಳಿದರು.
ನಗರದ ಶ್ರೀತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ “ಕನ್ಯಕಾ ಮಹಲ್” ನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕನ್ಯಕಾ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಉದ್ಘಾಟನೆಯನ್ನು ನೆರವೇರಿಸಿ, ನಂತರ ಅವರು ಮಾತನಾಡಿದರು.

ಶ್ರೀಕನ್ಯಕಾ ಸೌಹಾರ್ದ ಸಹಕಾರಿ ಸಂಘವು 1999ರಲ್ಲಿ ಪ್ರಾರಂಭಗೊಂಡು ಇಲ್ಲಿಯವರೆಗೂ ಅತ್ಯುತ್ತಮವಾಗಿ ವ್ಯವಹಾರ ನಡೆಸಿ, ಇದೀಗ 2025ನೇ ವರ್ಷಕ್ಕೆ 25 ವರ್ಷಗಳನ್ನು ಪೂರೈಸಿದ್ದು, ಆರ್ಯವೈಶ್ಯ ಸಮಾಜದ ಹಿರಿಯರ ಮಾರ್ಗದರ್ಶನ ಹಾಗೂ ನಮ್ಮ ಷೇರುದಾರರು ಹಾಗೂ ಗ್ರಾಹಕರ ಸಹಕಾರವೇ ನಮ್ಮ ಸಹಕಾರಿ ಸಂಘದ ಉನ್ನತಿಗೆ ಕಾರಣವಾಗಿದೆ ಎಂದರಲ್ಲದೆ,
ನನ್ನ ನಿರ್ದೇಶಕ ಮಿತ್ರರು ಹಾಗೂ ಸಹಕಾರಿಯ ಸಿಬ್ಬಂದಿಗಳಿಂದಾಗಿ ಉನ್ನತ ಸಾಧನೆಗೆ ಸಹಕಾರ ದೊರೆತಿದೆ ಇದರ ಜೊತೆಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇವರು ನಮ್ಮ ಶ್ರೀಕನ್ಯಕಾ ಸೌಹಾರ್ಧ ಸಹಕಾರಿಯನ್ನು ಈ ಸಾಲಿನ ಅತ್ಯುತ್ತಮ ಸಹಕಾರ ಸಂಘವೆಂದು ಗುರುತಿಸಿ, ಅಧ್ಯಕ್ಷರು ಮತ್ತು ವ್ಯವಸ್ಥಾಪಕರಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಿ,ಸನ್ಮಾನಿಸಿದ್ದಾರೆ.

ನಮ್ಮ ಶ್ರೀಕನ್ಯಕಾ ಸೌಹಾರ್ಧ ಸಹಕಾರಿ ಸಂಘದ ಕಟ್ಟಡವನ್ನು ಇದೀಗ ನವೀಕೃತಗೊಳಿಸಲಾಗಿದ್ದು, ಇದರ ಉದ್ಘಾಟನೆ ಮತ್ತು 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮವನ್ನು ಇದೇ ತಿಂಗಳ 21 ಮತ್ತು 22 ನೇ ತಾರೀಖು ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಸಂತಸ ಪಡುವ ವಿಚಾರ, ಈ ರಜತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಟಿ.ರಘುಮೂರ್ತಿರವರು ನೆರವೇರಿಸಲಿದ್ದಾರೆ
ಅಲ್ಲದೆ ಮುಖ್ಯಅತಿಥಿಗಳಾಗಿ ಸಂಸದರಾದ ಗೋವಿಂದಕಾರಜೋಳ, ಕರ್ನಾಟಕ ಆರ್ಯವೈಶ್ಯ ಸಮಾಜದ ರಾಜ್ಯಾಧ್ಯಕ್ಷರಾದ ಆರ್.ಪಿ.ರವಿಶಂಕರ್, ಬೆಂಗಳೂರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಜಿ.ನಂಜನಗೌಡ, ನಿರ್ದೇಶಕರಾದ ರಘುರಾಮರೆಡ್ಡಿ, ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಡಿ.ಆರ್.ತಿಪ್ಪೇಸ್ವಾಮಿ ನಡೆಸಿಕೊಡಲಿದ್ದಾರೆ ಎಂಬುದಾಗಿ ಅವರು ಸಭೆಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕೆಎವಿಎಂಎಸ್ ವಿದ್ಯಾಸಂಸ್ಥೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕೆ.ವಿ.ಅಮರೇಶ್ ಆರ್ಯವೈಶ್ಯ ಮಂಡಳಿ ಗೌರವಾಧ್ಯಕ್ಷರಾದ ಎಲ್.ಆನಂದಶೆಟ್ಟಿ, ಆರ್ಯವೈಶ್ಯ ಮಂಡಳಿ ಅಧ್ಯಕ್ಷರಾದ ಕೆ.ವಿ.ಸತ್ಯನಾರಾಯಣ, ಶ್ರೀಕನ್ಯಕಾ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷರಾದ ಎಸ್.ಹರ್ಷ, ಅನಂತಕುಮಾರ್, ಬಿ.ಆರ್.ರಮೇಶಬಾಬು, ಪಿ.ವಿ.ನಾಗರಾಜ್, ಶ್ರೀನಿವಾಸ್, ಮಂಜುನಾಥ್, ಹೆಚ್.ಎಸ್.ಅರುಣ್ ಕುಮಾರ್, ನವೀನ್, ಆಂಜನೇಯ, ತಿಪ್ಪೇಸ್ವಾಮಿ, ಮಧುಸೂದನ್, ಮಂಜಣ್ಣ, ಜೈಲಕ್ಷ್ಮಿ, ಲತಾ, ನಾಗಭೂಷಣ್, ಸಹಕಾರಿ ವ್ಯವಸ್ಥಾಪಕರಾದ ಎಸ್.ರಾಮಕೃಷ್ಣ, ನವೀನ್ ಕುಮಾರ್, ಜಯದೇವಯ್ಯ, ಜಗದೀಶ್, ಸುಬ್ರಹ್ಮಣ್ಯ, ಸುಧೀಂದ್ರ, ಪಿ.ಎಸ್.ಶಿಲ್ಪ, ಮಧುಸೂದನ್, ಆರ್.ಪ್ರಕಾಶ್ ಕುಮಾರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
