

ಹಿರಿಯೂರು:
ನಗರದ ನಗರಸಭೆಯಲ್ಲಿ ದಸರಾಹಬ್ಬವು ನಗರಸಭೆ ಪೌರಕಾರ್ಮಿಕರಿಗೆ ವಿಶೇಷವಾಗಿತ್ತು. ನಗರಸಭೆಯ ಪೌರಾಯುಕ್ತರಾದ ಎ.ವಾಸೀಂರವರು ಸಂಗೀತ ಹಾಡುವುದರ ಮೂಲಕ ಪೌರಕಾರ್ಮಿಕರ ಗಮನ ಸೆಳೆದರು.
ನಗರಸಭೆಯ ದಸರಾಹಬ್ಬ ವಿಜೃಂಭಣೆಯಿಂದ ಆಚರಿಸಲಾಯಿತು. ನಗರಸಭೆಯ ಎಲ್ಲಾ ವಾಹನಗಳಿಗೆ ಅಲಂಕರಿಸಿ ಪೂಜಿಸಲಾಯಿತು. ನಂತರ ನಗರದ ಪ್ರಧಾನರಸ್ತೆ ಮೂಲಕ ರಂಜಿತ್ ಹೋಟೆಲ್ ರವರಿಗೂ ಎಲ್ಲಾ ವಾಹನಗಳು ಸಾಲು ಸಾಲಾಗಿ ಹೋಗಿದ್ದು ತುಂಬಾ ವಿಶೇಷವಾಗಿತ್ತು. ಪೌರಾಯುಕ್ತರಾದ ಎ.ವಾಸೀಂ ರವರು ವಾಹನ ಚಲಾಯಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ, ಸ್ಥಾಯಿಸಮಿತಿ ಅಧ್ಯಕ್ಷರಾದ ಶ್ರೀಮತಿ ಮಮತ, ಎಂ.ಡಿ.ಸಣ್ಣಪ್ಪ, ನಗರಸಭೆ ಆರೋಗ್ಯ ನಿರೀಕ್ಷಕರು ಸಂಧ್ಯಾ , ಸುನೀಲ್, ಅಶೋಕ, ಮಹಾಲಿಂಗಪ್ಪ, ಪೌರಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.