

ಹಿರಿಯೂರು:
ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ರವರ ಜನ್ಮದಿನದ ಅಂಗವಾಗಿ ನಗರ ವ್ಯಾಪ್ತಿಯ ವಾರ್ಡ್ ನಂ 8 ರಲ್ಲಿರುವ ಸ್ಮಶಾನದಲ್ಲಿ ಸ್ವಚ್ಛತಾ ಇ ಸೇವಾ ಕಾರ್ಯಕ್ರಮದಡಿ ಶ್ರಮಾಧಾನ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮತ್ತು ಉಪಾಧ್ಯಕ್ಷರು, ಸ್ಥಾಯಿಸಮಿತಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ಪೌರಾಯುಕ್ತರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷಬಾಲಕೃಷ್ಣ, ಸ್ಥಾಯಿಸಮಿತಿ ಅಧ್ಯಕ್ಷ ಸಣ್ಣಪ್ಪ, ಶ್ರೀಮತಿಮಮತ, ಮತ್ತು ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸಾದತ್, ಪೌರಯುಕ್ತ ಎ.ವಾಸೀಂ, ತಾಂತ್ರಿಕ ಶಾಖೆಯ ಎ.ಇ.ಇ. ಶ್ರೀರಂಗ, ಆರೋಗ್ಯ ನೀರಿಕ್ಷಕ ಸುನಿಲ್ ಕುಮಾರ್, ಶ್ರೀಮತಿ ಸಂಧ್ಯಾ, ಅಶೋಕ್ ಕುಮಾರ್, ಮಹಾಲಿಂಗ, ನಯಾಜ್, ಪೌರಕಾರ್ಮಿಕರ ಅಧ್ಯಕ್ಷ ಹನುಮಂತಪ್ಪ ಮತ್ತು ಧಫೇಧರ್ ಈರಖ್ಯಾತಪ್ಪ, ವಾಹನ ಚಾಲಕರು, ಪೌರಕಾರ್ಮಿಕರು ಕೆಲಸ ನಿರ್ವಹಿಸಿದರು.