October 6, 2025
00003

ಹಿರಿಯೂರು:

ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಅಹಿಂಸಾ ತತ್ವಗಳಿಗೆ  ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ.  ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್  ಶಾಸ್ತ್ರಿಯವರ ಸರಳಜೀವನ,ಅಹಿಂಸೆ, ಸತ್ಯ, ಶಾಂತಿ, ತತ್ವಾದರ್ಶಗಳು  ಸೂರ್ಯ- ಚಂದ್ರ  ಇರುವವರೆಗೂ ಪ್ರಸ್ತುತವಾಗಿರುತ್ತವೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರ್ ರಾದ ಸಿದ್ದೇಶ್ ಅವರು   ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ  ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.

ಗಾಂಧೀಜಿ, ಶಾಸ್ತ್ರೀಜಿ ಅವರು ದೇಶದಲ್ಲಿ ಜಾತಿರಹಿತ, ವರ್ಗರಹಿತ ಸಮಾಜ ಕಟ್ಟುವ ವಿಶ್ವಾಸ ಹೊಂದಿದ್ದರು. ಕೆಳಸ್ತರದ ಹರಿಜನರನ್ನು ದೇವರ ಮಕ್ಕಳು ಎಂದು ಕರೆದ ಗಾಂಧೀಜಿ, ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು, ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ   ಎಂದು ಕರೆನೀಡಿ ದೇಶಪ್ರೇಮ ಮೆರೆದರು  ಎಂಬುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಸಾಮಾಜಿಕ, ಶೈಕ್ಷಣಿಕ ಜಾತಿಗಣತಿ ಕಾರ್ಯಕ್ರಮವನ್ನು 6ದಿನಗಳ ಒಳಗಾಗಿ ಪೂರೈಸಿದಂತಹ 50ಜನ ಜನಗಣತಿದಾರರಿಗೆ  ಸನ್ಮಾನಿಸಿ, ಗೌರವಿಸಲಾಯಿತು. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ತಹಶೀಲ್ದಾರ್ ರಾದ ಸಿದ್ದೇಶ್ ಅವರು  ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಆಗಮಿಸಿದ್ದ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಸಿ.ಎಂ.ತಿಪ್ಪೇಸ್ವಾಮಿ ಅವರು  ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಎಸ್.ಎನ್. ಮಂಜುನಾಥ  ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ  ನಗರಸಭೆ  ಪೌರಾಯುಕ್ತರಾದ ವಾಸೀಂ, ಸಮಾಜ ಕಲ್ಯಾಣಧಿಕಾರಿಗಳಾದ ದಿನೇಶ್, ಇ.ಸಿ.ಒ.ಪುಟ್ಟರಾಜು, ಜಾಫರ್,  ತಾಲ್ಲೂಕು ಕಚೇರಿ ಸಿಬ್ಬಂದಿ ವರ್ಗದವರಾದ ಶ್ರೀನಿವಾಸರೆಡ್ಡಿ ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.  

About The Author

Leave a Reply

Your email address will not be published. Required fields are marked *