October 6, 2025
0004

ಹಿರಿಯೂರು:

ಗ್ರಾಮೀಣ ರೈತರು ಕಷ್ಟಪಟ್ಟು ಬೆಳೆದು ತರುವ ಬೆಳೆಗೆ ನಗರದಲ್ಲಿ ನಗರಸಭಾ ಟೆಂಡರ್ ದಾರರಿಂದ ನಿರ್ಧಾಕ್ಷಿಣ್ಯವಾಗಿ ಹಾಗೂ ದೌರ್ಜನ್ಯದಿಂದ ನೆಲವಳಿ ಶುಲ್ಕ ವಸೂಲಿ ಮಾಡುತ್ತಿದ್ದು, ಇದು ನಿಜಕ್ಕೂ ರೈತರಿಗೆ ಮಾಡುವ ಅನ್ಯಾಯವಾಗಿದೆ, ಅಲ್ಲದೆ ರೈತರು ಬೆಳೆದು ತರುವ ತರಕಾರಿ,  ಹೂವು , ಸೊಪ್ಪಿನ ಚೀಲಗಳಿಗೂ ಮನಬಂದಂತೆ ಶುಲ್ಕ ವಿಧಿಸಿ, ವಸೂಲಿ ಮಾಡುತ್ತಿರುವುದು ರೈತರ ಹಕ್ಕಿನ ಮೇಲೆ ನೇರದಾಳಿಯಾಗಿದೆ ಎಂಬುದಾಗಿ ಕಿಸಾನ್ ಘಟಕದ ಅಧ್ಯಕ್ಷರಾದ ಜೆ.ಜಿ.ಹಳ್ಳಿ ಕೇಶವ್ ಅವರು ಆರೋಪಿಸಿದ್ದಾರೆ.

ನಗರದ ನಗರಸಭೆ ಆವರಣದಲ್ಲಿ ತಾಲ್ಲೂಕು ಕಾಂಗ್ರೆಸ್ ಕಿಸಾನ್ ಘಟಕದ ವತಿಯಿಂದ ರೈತರು ಬೆಳೆದು ತರುವಂತ ತರಕಾರಿ, ಹೂವು, ಸೊಪ್ಪಿನ ಚೀಲಗಳಿಗೆ  ಯಾವುದೇ ನೆಲವಳಿ ಶುಲ್ಕವನ್ನು ವಿಧಿಸದಂತೆ  ರೈತರ ಪರವಾಗಿ ಪೌರಸಭೆ ಆಯುಕ್ತರು ಮತ್ತು ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮನವಿಪತ್ರವನ್ನು ಸಲ್ಲಿಸಿ ನಂತರ ಅವರು ಮಾತನಾಡಿದರು.

ರೈತರು ಅಷ್ಟೇನೂ ಲಾಭ ಪಡೆಯದೆ ಬೆವರು ಸುರಿಸಿ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತರುವಾಗಲೇ ನೆಲವಳಿ ಶುಲ್ಕ ವಸೂಲಿ ಮಾಡುವುದು ಅವರ ಬದುಕಿಗೆ ಹೊಡೆತ ನೀಡುವುದಾಗಿದೆ ಎಂದರಲ್ಲದೆ,  ರೈತರೇ ದೇಶದ ಬೆನ್ನೆಲುಬು. ಇದನ್ನ ಮನದಲ್ಲಿಟ್ಟಕೊಂಡು ರೈತರಿಗೆ ತಕ್ಷಣವೇ ನ್ಯಾಯ ದೊರಕುವಂತೆ  ರೈತರ ಬಳಿ ಈ ನೆಲವಳಿ ವಸೂಲಾತಿಕ್ರಮವನ್ನು ಹಿಂತೆಗೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಕಾಂಗ್ರೆಸ್ ಮುಖಂಡರು ಹಾಗೂ ತಾಲ್ಲೂಕು ಕಿಸಾನ್ ಘಟಕದ ಅಧ್ಯಕ್ಷರಾದ ಜೆ.ಜಿ.ಹಳ್ಳಿ ಕೇಶವ, ಉಪಾಧ್ಯಕ್ಷರಾದ ಮಾರುತಿ, ಪ್ರಧಾನಕಾರ್ಯದರ್ಶಿಯಾದ ರವಿ,  ಖಜಾಂಚಿ ಪಾಲಾಕ್ಷ, ಕಾರ್ಯದರ್ಶಿಗಳಾದ ಕಾರ್ತಿಕ್,  ಮಂಜುನಾಥ್,  ರಾಕೇಶ್,  ಜಬಿವುಲ್ಲಾ ,ತಿರ್ಮ, ಗೌತಮ್, ವಿಶ್ವ ಸೇರಿದಂತೆ ಅನೇಕ ಮುಖಂಡರು ಹಾಗೂ ರೈತರು  ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *